ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೈಸರ್ಗಿಕ ಸಂಪತ್ತಿನ ರಕ್ಷಣೆ ಅಗತ್ಯ: ಕಣವಿ

Lingaraj Badiger
Updated On : 27 Feb 2014, 11:06 am

ಧಾರವಾಡ: ನಾಗರಿಕ ಮತ್ತು ಜಾನಪದ ತವರೂರು ಧಾರವಾಡ. ನೈಸರ್ಗಿಕ ಸಂಪತ್ತು ಹೊಂದಿರುವ ಧಾರವಾಡ ನಗರವನ್ನು ಸುಸಂಸ್ಕೃತ ರೀತಿಯಲ್ಲಿ ಕಾಪಾಡಬೇಕಿದೆ ಎಂದು ನಾಡೋಜ ಚೆನ್ನವೀರ ಕಣವಿ ಹೇಳಿದರು.
ಹು-ಧಾ ನಾಗರಿಕ ಪರಿಸರ ಸಮಿತಿ ವತಿಯಿಂದ ಪರಿಸರ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪರಿಸರವನ್ನು ಸಂರಕ್ಷಿಸುವ ಹಾಗೂ ಸುಧಾರಿಸುವ ಕೆಲಸವನ್ನು ಪರಿಸರ ಸಮಿತಿ ಮಾಡುತ್ತಿದೆ. ಇಂತಹ ಬೆಳವಣಿಗೆ ಇಂದಿನ ಸಮಾಜಕ್ಕೆ ಅವಶ್ಯಕ. ಸಾಧಕರು ಯಾವಾಗಲೂ ಕಷ್ಟಪಟ್ಟು ಪರಿಶ್ರಮದಿಂದ ಮೇಲೆ ಬರುತ್ತಾರೆ. ಆ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಬಿ. ಕಲಿವಾಳ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎ.ಎಸ್. ಬಾಲಸುಬ್ರಮಣ್ಯ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಬಿ.ಬಿ. ಕಲಿವಾಳ ಹಾಗೂ ಫೆ. 28ರಂದು ನಿವೃತ್ತ ಆಗಲಿರುವ ಡಾ.ಎ.ಎಸ್. ಬಾಲಸುಬ್ರಮಣ್ಯ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಬಿ. ಹಿರೇಮಠ. ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಕಾರ್ಯದರ್ಶಿ ಬಾಳಣ್ಣ ಶಿಗೇಹಳ್ಳಿ ಇದ್ದರು. ಕೆ.ಇ ಬೋರ್ಡ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಬಾಳಣ್ಣ ಶಿಗೇಹಳ್ಳಿ ಸ್ವಾಗತಿಸಿದರು. ಕೆ. ಜಗುಚಂದ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement