ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಾಲೆ ಧೋರಣೆ ಖಂಡಿಸಿ ಪ್ರತಿಭಟನೆ

Lingaraj Badiger
Updated On : 2 Jan 2014, 12:23 pm

ಧಾರವಾಡ: ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲು ಪಾಲಕರಿಂದ ಅನುಮತಿ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಜೆಎಸ್ಸೆಸ್ ಪಬ್ಲಿಕ್ ಶಾಲೆಯ ಮಕ್ಕಳ ಪಾಲಕರು ಪ್ರತಿಭಟನೆ ಮಾಡಿದರು. ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವ ವಿಷಯಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಚಾರ್ಯರು ಪಾಲಕರಿಗೆ ಮಕ್ಕಳ ಮೂಲಕ ಪತ್ರ ಕಳುಹಿಸಿ, ಪ್ರವಾಸದ ಸಂದರ್ಭದಲ್ಲಿ ಮಕ್ಕಳಿಗೇನಾದರೂ ಅನಾಹುತವಾದರೆ ಅದಕ್ಕೆ ಶಾಲಾ ಆಡಳಿತ ಮಂಡಳಿ ಜವಾಬ್ದಾರರಲ್ಲ ಎಂಬ ಪತ್ರಕ್ಕೆ ಸಹಿ ಹಾಕಿ ಕಳಿಸಿ ಎಂದು ಕೋರಿದ್ದರು. ಮಕ್ಕಳ ಬಗ್ಗೆ ಜವಾಬ್ದಾರಿಯಿಂದ ನುಣಚಿಕೊಳ್ಳುವ ಶಾಲೆಯ ಆಡಳಿತ ಮಂಡಳಿ ಯಾಕೆ ಪ್ರವಾಸ ಹಮ್ಮಿಕೊಳ್ಳಬೇಕು ಎಂದು ಪಾಲಕರ ಸಂಘದ ಅಧ್ಯಕ್ಷ ಆರ್.ಎಸ್. ಪಾಟೀಲ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು. ಪಾಲಕರನ್ನು ಒಳಗೊಂಡ ಶಾಲಾ ಆಡಳಿತ ಪರಿಷತ್ ಮತ್ತು ಶಾಲಾ ಕ್ಯಾಬ್ ಸಮಿತಿ ರಚಿಸಬೇಕು ಎಂದು ಪಾಲಕರು ಒತ್ತಾಯಿಸಿದರು. ನಂತರ  ಆಡಳಿತಾಧಿಕಾರಿ ಎಂ.ಪಿ.ಬಗಲಿ ಪಾಲಕರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಾಚಾರ್ಯ ಗುರುಪಾದ ಹೆಗಡಿ ಅವರು ಪಾಲಕರಿಂದ ಪತ್ರ ಬರೆಸಿಕೊಳ್ಳುವ ವಿಷಯದಲ್ಲಿ ತಪ್ಪಾಗಿದೆ ಎಂದ ಬಳಿಕ ಪ್ರತಿಭಟನೆ ಅಂತ್ಯವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement