ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ

Lingaraj Badiger
Updated On : 4 Jan 2014, 11:30 am

ಹುಬ್ಬಳ್ಳಿ: ಇಲ್ಲಿಯ ಗೋಕುಲ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಜ. 5ರಂದು ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಜಂಬೂ ಸವಾರಿಯೊಂದಿಗೆ ನಡೆಯಲಿದೆ. ಗೋಕುಲ ರಸ್ತೆಯ ಬಸವೇಶ್ವರನಗರದ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಅಂದು ಮಧ್ಯಾಹ್ನ 3 ಗಂಟೆಗೆ ಜಂಬೂ ಸವಾರಿ ಪ್ರಾರಂಭಗೊಂಡು, ಗೋಕುಲ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕೊನೆಗೊಳ್ಳುವುದು. ಮೋಹನ ಗುರುಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಮೆರವಣಿಗೆಯಲ್ಲಿ ಆನಂದ ಗುರುಸ್ವಾಮಿ, ಎಚ್.ಆರ್. ಸಂಪತ್ತಕುಮಾರ ಗುರುಸ್ವಾಮಿ ಮತ್ತಿತರರು ಪಾಲ್ಗೊಳ್ಳುವರು.
ವಿಶೇಷ ಪೂಜೆ: ಗೋಕುಲ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜ. 7, 8 ಮತ್ತು 14ರಂದು ವಿಶೇಷ ಪೂಜೆ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಜ. 7 ಮತ್ತು 8ರಂದು ಗಣಹೋಮ, ದೀಪಾರಾಧನೆ, ಅಭಿಷೇಕ, ಭಜನೆ, ಅತ್ತಾಳ ಪೂಜೆ ಮತ್ತಿತರ ಪೂಜೆ ನಡೆಯಲಿದ್ದು, ಮಕರ ಜ್ಯೋತಿ ಸಂಕ್ರಮಣ ನಿಮಿತ್ತ ಜ. 14ರಂದು ವಿಶೇಷ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಪಂಚಾಕ್ಷರಿ ಹಿರೇಮಠಗೆ ಸನ್ಮಾನ
ಧಾರವಾಡ: ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಸಾಧನೆಗೈದ ನೇಚರ್ ಫಸ್ಟ್ ಲ್ಯಾಂಡ್ ಸ್ಕೇಪರ್ ಸಂಸ್ಥೆ ಮುಖ್ಯಸ್ಥ ಪಂಚಾಕ್ಷರಿ ಹಿರೇಮಠ ಅವರನ್ನು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ವತಿಯಿಂದ ಜ. 4 ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಸನ್ಮಾನಿಸಲಾಗುವುದು. ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ಓ.ಕೆ. ಸ್ವಾಮಿ, ಮಹಾದೇವಯ್ಯ, ಎಸ್.ಎಸ್. ಫಡಕೆ ಭಾಗವಹಿಸುವರು. ಸಿದ್ಧನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶಂಕರ ಕುಂಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡ: ಇಂದು ಹೃದಯ ರೋಗ ತಪಾಸಣೆ
ಧಾರವಾಡ: ಇಲ್ಲಿನ ಕೆ.ಸಿ. ಪಾರ್ಕ್ ಬಳಿಯ ರೋಟ್ಸನ್ ಗಾರ್ಡನ್ ಅಪಾರ್ಟಮೆಂಟ್ ಸಾಂಸ್ಕೃತಿಕ ಭವನದಲ್ಲಿ ಜ. 4ರಂದು ಬೆಳಗ್ಗೆ 9.30ಕ್ಕೆ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶ್ರದ್ಧಾ ಫೌಂಡೇಶನ್, ರೋಟ್ಸ್‌ನ್ ಗಾರ್ಡನ್ ಅಪಾರ್ಟಮೆಂಟ್ ನಿವಾಸಿಗಳ ಸಂಘ, ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಜಂಟಿಯಾಗಿ ಶಿಬಿರ ಆಯೋಜಿಸಿದೆ. ಹು-ಧಾ ಪೊಲೀಸ್ ಕಮಿಷನರ್ ರವೀಂದ್ರ ಪ್ರಸಾದ ಶಿಬಿರ ಉದ್ಘಾಟಿಸುವರು. ಎನ್.ಸಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಡಾ.ಎ.ಎಸ್. ಪ್ರಭಾಕರ, ಡಾ.ವಿವೇಕಾನಂದ ಗಜಪತಿ, ಮಹೇಶ ಶೆಟ್ಟಿ, ಸುರೇಶ ಯಲಿಗಾರ, ರಜಿಯಾಬೇಗಂ ಸಂಗೊಳ್ಳಿ, ಮಾರುತಿ ಬಾರಕೇರ, ಕಿಶೋರ ದಾಮೋದರ, ಅಜಿತ ಬೊಗಾರ ಭಾಗವಹಿಸುವರು.
ಬಿಜೆಪಿ ಯುವ ಮೋರ್ಚಾ ಘಟಕಕ್ಕೆ ಶಂಕರ ನೇಮಕ
ಧಾರವಾಡ: ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕಿನ ನರೇಂದ್ರ ಗ್ರಾಮದ ಶಂಕರ ಕೊಮಾರದೇಸಾಯಿ ನೇಮಕವಾಗಿದ್ದಾರೆ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅವರು ಈ ನೇಮಕ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲ್ಕನೇ ದಿನಕ್ಕೆ ಕಾಲಿರಿಸಿದ ಸತ್ಯಾಗ್ರಹ
ಕನ್ನಡಪ್ರಭ ವಾರ್ತೆ, ಕಲಘಟಗಿ, ಜ. 3
ಇಲ್ಲಿನ ಪಪಂನಲ್ಲಿನ ಭ್ರಷ್ಟಾಚಾರ ತಡೆಗಟ್ಟಬೇಕು ಹಾಗೂ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರೊಂದಿಗೆ ಪಪಂ ಸದಸ್ಯರು ನಡೆಸುತ್ತಿರುವ ಶುಕ್ರವಾರ 4ನೇ ದಿನಕ್ಕೆ ಕಾಲಿರಿಸಿದೆ.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಪಪಂನಲ್ಲಿನ ಭ್ರಷ್ಟಾಚಾರ ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದಲ್ಲದೆ ಮುಖ್ಯಾಧಿಕಾರಿ ಅಮಾನತುಗೊಳಿಸುವುದಕ್ಕೂ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದು ಗಮನ ಸೆಳೆಯುವುದಾಗಿ ತಿಳಿಸಿದರು.
ನಂತರ ತಕ್ಷಣದಿಂದ ಉಪವಾಸ ಸತ್ಯಾಗ್ರಹ ಕೈಬಿಡುವಂತೆಯೂ ಮಾನೆ ಮಾಡಿಕೊಂಡ ಮನವಿಗೆ ಸ್ಪಂದಿಸಲು ನಿರಾಕರಿಸಿದ ಪ್ರತಿಭಟನಾಕಾರರು, ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದರು.
ಸದಸ್ಯರಾದ ನಾಗರಾಜ ಉಡುಪಿ, ಸಿಕಂದರ ಬಾಷಾ ಬೇಪಾರಿ, ಬೂದಪ್ಪ ಹುರಕಡ್ಲಿ, ತಾನಾಜಿ ನಿಕ್ಕಂ, ರೂಪಾ ಗೌಳಿ,  ಗೀತಾ ದೈವಜ್ಞ, ಪ್ರವೀಣ ದೈವಜ್ಞ, ಕಿರಣ ದೈವಜ್ಞ, ಗಂಗಾಧರ ಗೌಳಿ, ಟೋಪಣ್ಣ ಲಮಾಣಿ,  ಬಸವರಾಜ ಹಟಿಗಾರ, ಕೃಷ್ಣಾ ಲಮಾಣಿ, ಬಸವರಾಜ ಬೇಗೂರಶೆಟ್ಟಿ, ಅಶೋಕ ಅರ್ಕಸಾಲಿ, ಪ್ರಕಾಶ ಧೂಪದ, ಮಂಜುನಾಥ ಶ್ಯಾನವಾಡ, ಗಂಗಪ್ಪ ವಾಲಿ, ಉಮೇಶ ಜೋಶಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ವೈ. ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಫಕ್ಕೀರೇಶ ನೇಸರೇಕರ, ಮಹಾಂತೇಶ ತಹಶೀಲ್ದಾರ, ನಾರಾಯಣ ಮಧೂಕರ, ನಿಂಗಪ್ಪ ಖಾನೋಜಿ, ಲಿಂಗರೆಡ್ಡಿ ನಡುವಿನಮನಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement