ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕ್ರೀಡೆಯಿಂದ ಕೆಲಸದ ಒತ್ತಡ ನಿವಾರಣೆ: ಪ್ರಸಾದ

Lingaraj Badiger
Updated On : 6 Jan 2014, 12:40 pm

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 5
ನಿರಂತರ ಕೆಲಸದ ಒತ್ತಡವನ್ನು ಕ್ರೀಡೆ ನಿವಾರಿಸುತ್ತದೆ. ದಿನದ 24 ಗಂಟೆ ಸಮಾಜ ರಕ್ಷಣೆ ಜವಾಬ್ದಾರಿ ನಿರ್ವಹಿಸುವ ಪೊಲೀಸರಿಗೆ ಕ್ರೀಡಾ ಚಟುವಟಿಕೆಗಳು ಮಾನಸಿಕ ನೆಮ್ಮದಿ ನೀಡುತ್ತವೆ ಎಂದು ಟಾಟಾ ಮಾರ್ಕೊಪೊಲೋ ಕಂಪನಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ ಮುಖ್ಯಸ್ಥ ಎಂ.ಎಸ್.ಆರ್.ಕೆ. ಪ್ರಸಾದ ಹೇಳಿದರು.
ಭಾನುವಾರ ಇಲ್ಲಿನ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕ್ರೀಡಾಂಗಣದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ವ್ಯಕ್ತಿ ಕ್ರೀಯಾಶೀಲನಾಗಿ ಕೆಲಸ ಮಾಡುತ್ತಾನೆ. ಮಾನಸಿಕ ನೆಮ್ಮದಿ ಇದ್ದರೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ಪ್ರತಿ ವರ್ಷ ನಡೆಯುವ ಪೊಲೀಸ್ ಕ್ರೀಡಾಕೂಟ ಪೊಲೀಸ್ ಸಿಬ್ಬಂದಿಯ ಕ್ಷಮತೆ ಹೆಚ್ಚಾಗುವುದರಿಂದ ಸಮಾಜಕ್ಕೆ ಉಪಯೋಗ ಎಂದು ಹೇಳಿದರು. ಕ್ರೀಡೆ ನಮ್ಮ ಜೀವನದ ನಿತ್ಯದ ಭಾಗವಾದಾಗ ಮಾತ್ರ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಉದ್ಯಮಿಗಳಾದ ಎಂ.ವಿ. ಸುಬ್ಬಾರೆಡ್ಡಿ ಮತ್ತು ನಾರಾಯಣ ಕೋಪರ್ಡೆ ಮಾತನಾಡಿದರು. ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶಕುಮಾರ ಸ್ವಾಗತಿಸಿದರು. ಡಿವೈಎಸ್ಪಿ ರಾಜೀವ ಬನಹಟ್ಟಿ ವಂದಿಸಿದರು. ಆರ್‌ಪಿಐ ಶಿವಾನಂದ ಜಿ.ಸಿ. ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಎ.ಸಿ. ಅಲ್ಲಯ್ಯನವರಮಠ ನಿರೂಪಿಸಿದರು. ಪೊಲೀಸ್ ಅಧಿಕಾರಿಗಳಾದ ಶಂಭುಲಿಂಗಪ್ಪ ಬುಯ್ಯಾರ, ಬಿ.ವಿ. ಲಿಂಗದಾಳ, ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ಪ್ರಾಚಾರ್ಯ ಡಾ.ವೈ.ಪಿ. ಕಲ್ಲನಗೌಡರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement