ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಾಮ ಜನ್ಮಭೂಮಿ: ಕಾನೂನು ರೂಪಿಸಿ

Lingaraj Badiger
Updated On : 6 Jan 2014, 12:40 pm

ಧಾರವಾಡ: ಅಯೋಧ್ಯೆ ಶ್ರೀರಾಮನ ಜನ್ಮ ಭೂಮಿ ಹಿಂದೂಗಳಿಗೆ ಸೇರಿದ್ದು ಎಂದು ಸರ್ಕಾರ ಕಾನೂನು ರೂಪಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯಜೀ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಗೂ ಮುಂಚೆಯೇ ಈ ಕುರಿತು ಕಾನೂನು ರಚನೆಯಾಗಿ ಜಾರಿಗೊಳ್ಳಬೇಕು. ಸದ್ಯ ದೇಶದ ಜನಸಂಖ್ಯೆಯಲ್ಲಿ ಹಿಂದೂಗಳ ಸಂಖ್ಯೆ ಪ್ರತಿ ವರ್ಷ ಕಡಿಮೆಯಾಗುತ್ತಿದ್ದು, ಅನ್ಯ ಕೋಮಿನ ಜನಸಂಖ್ಯೆ ಹೆಚ್ಚಾಗುತ್ತಿದೆ. ಅಂಥ ಸ್ಥಿತಿಯಲ್ಲಿ ಸಮಾನ ಕಾನೂ ನು ಜಾರಿಗೊಳಿಸುವ ಮೂಲಕ ಸರ್ಕಾರ ಜನಸಂಖ್ಯೆಯಲ್ಲಿ ಸಮತೋಲನ ಕಾಯ್ದುಕೊಳ್ಳುವಂತೆ ಮಾಡಬೇಕು ಎಂದರು.
ದೇಶದಲ್ಲಿ ಭ್ರಷ್ಟಾಚಾರ, ಮಹಿಳೆಯರ ಮೇಲಿನ ಶೋಷಣೆಗಳು ಹೆಚ್ಚಾಗುತ್ತಿವೆ. ಆ ನಿಟ್ಟಿನಲ್ಲಿ ದೇಶದ ಸಮಸ್ಯೆ ಬಗೆಹರಿಸಲು ಹಿಂದೂಗಳೆಲ್ಲರೂ ಜಾಗೃತರಾಗಿ ಹೋರಾಟ ನಡೆಸಬೇಕು. ದೇಶವನ್ನು ಸುಖಿ ರಾಜ್ಯ ಮಾಡುವ ಉದ್ದೇಶ ವಿಶ್ವ ಹಿಂದು ಪರಿಷತ್‌ಗಿದ್ದು ಅದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಗೋಷ್ಠಿಯಲ್ಲಿ ಪರಿಷತ್ ಪ್ರಾಂತೀಯ ಧರ್ಮಚಾರ್ಯ ಸಂಪರ್ಕ ಪ್ರಮುಖ ಶ್ರೀಧರ ದೀಕ್ಷಿತ್, ಜಿಲ್ಲಾಧ್ಯಕ್ಷ ಮೋಹನ ಕಾನಗೋ, ಜಿಲ್ಲಾ ಕಾರ್ಯದರ್ಶಿ ಶರಣು ಅಂಗಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement