ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

25ಕ್ಕೂ ಹೆಚ್ಚು ಕಾರ್ಯಕರ್ತರು ರಾಜಿನಾಮೆ

Mainashree
Updated On : 9 Jan 2014, 10:32 am

ಹುಬ್ಬಳ್ಳಿ: ಭ್ರಷ್ಟಾಚಾರ, ಗೋಹತ್ಯೆ, ಲವ್ ಜಿಹಾದ್ ಸೇರಿದಂತೆ ಮತ್ತಿತರ ಅನಿಷ್ಟಗಳ ವಿರುದ್ಧ ಹೋರಾಡುವ ಪಟತೊಟ್ಟಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿರುವ 25ಕ್ಕೂ ಹೆಚ್ಚು ಹಿಂದುತ್ವವಾದಿ ಕಾರ್ಯಕರ್ತರು ಶ್ರೀರಾಮಸೇನೆಗೆ ರಾಜಿನಾಮೆ ಸಲ್ಲಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸೇನಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಲಾಸ ಪವಾರ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಾವು ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದ್ದು ಈ ಕುರಿತಂತೆ ರಾಜೀನಾಮೆ ಪತ್ರವನ್ನು ಸೇನಾದ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರಿಗೆ ಸಲ್ಲಿಸಲಾಗಿದೆ ಎಂದರು. ಹಿಂದೂ ಧರ್ಮ ಹಾಳುಗೆಡವುತ್ತಿರುವವರ ವಿರುದ್ಧ ಧರ್ಮ ಆಧಾರಿತ ರಾಜಕೀಯ ಪಕ್ಷವೊಂದರಿಂದಲೇ ಸಾಧ್ಯ. ಹಿಂದುತ್ವ ಪ್ರಖರತೆ, ರಾಷ್ಟ್ರ-ಧರ್ಮ ರಕ್ಷಣೆ ತುಡಿತ ಹಾಗೂ ಭಾಷಣದ ಪ್ರಭಾವಕ್ಕೊಳಗಾಗಿ ತಾವೆಲ್ಲರೂ ರಾಷ್ಟ್ರ-ಧರ್ಮ ರಕ್ಷಣೆಗೆ ಕಟಿಬದ್ಧರಾಗಿ ಶ್ರೀರಾಮಸೇನಾದೊಂದಿಗೆ ಗುರುತಿಸಿಕೊಂಡಿದ್ದೆವು ಎಂದು ತಿಳಿಸಿದರು.
ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಪ್ರಸಾದ ಅತ್ತಾರ, ಉತ್ತರ ಪ್ರಾಂತ ರಾಜ್ಯಾಧ್ಯಕ್ಷ ರವಿ ಶಿದ್ಲಿಂಗ, ಉತ್ತರ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ ಚಿಲ್ಲಾಳ ಸೇರಿದಂತೆ 25ಕ್ಕೂ ಹೆಚ್ಚು ಕಾರ್ಯಕರ್ತರು ಶ್ರೀರಾಮಸೇನೆಗೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಪವಾರ ವಿವರಿಸಿದರು. ರವಿ ಶಿದ್ಲಿಂಗ, ಅಶೋಕ ಸವದತ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement