ಬೆಲೆ ಏರಿಕೆ: ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ಧಾರವಾಡ: ಬೆಲೆ ಏರಿಕೆ ನೀತಿ ವಿರೋಧಿಸಿ ಇಲ್ಲಿನ ಬಿಜೆಪಿ ಮಹಾನಗರ ಜಿಲ್ಲಾ ಹಾಗೂ ಗ್ರಾಮಾಂತರ ಮಹಿಳಾ ಮೋರ್ಚಾದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಒಲೆ ಹೂಡಿ ಅಡುಗೆ ಮಾಡಿ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪದೇ ಪದೇ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನಸಾಮಾನ್ಯರ ಬಾಳು ದುಸ್ತರವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ನಗರ ಮಹಿಳಾ ಅಧ್ಯಕ್ಷೆ ಗೀತಾ ಪಾಟೀಲ, ಪುಷ್ಪಾ ನವಲಗುಂದ, ಪೂರ್ಣಾ ಪಾಟೀಲ, ನಿರ್ಮಲಾ ಜವಳಿ, ಅನಸೂಯಾ ಹಿರೇಮಠ, ರೇಣುಕಾ ಕೋಳೆಕರ, ಗೀತಾ ಮರಿಲಿಂಗಣ್ಣವರ, ಪ್ರೇಮಾ ಕೋಮಾರ ದೇಸಾಯಿ, ಬಸಮ್ಮ ಬಸರಿಕೊಪ್ಪ, ಗೀತಾ ಮುಗದ, ಜಯಶ್ರೀ ಮೋಟೆ, ಧನಲಕ್ಷ್ಮೀ ತೆರದಾಳ, ನಿರ್ಮಲಾ ಬಿದರಿ, ಶೋಭಾ ಮೆಣಜಗಿ, ಸುಶೀಲಾ ಜಂಗಿನಮಠ, ಭಾರತಿ ತುರಮರಿ, ಗೀತಾ ಉಳ್ಳಿಗೇರಿ, ಸುಶೀಲಾ ಹಳಕಟ್ಟಿ, ಚೈತ್ರಾ ನಿಡವಣಿ, ಮಲ್ಲವ್ವ ಗದಗ, ರೋಷನ್‌ಬಿ ನದಾಫ, ಪ್ರೇಮಾ ಪಾಟೀಲ, ಫಾತೀಮಾ ನದಾಫ ಇದ್ದರು.