ಸುದ್ದಿಸಂಕ್ಷೇಪ
ಇಂದು ಉದ್ಘಾಟನೆ
ಧಾರವಾಡ: ಶ್ರೀ ಸಾಯಿ ಎಂಟರ್‌ಪ್ರೈಸಸ್‌ನಿಂದ ಪರಿಸರ ಸ್ನೇಹಿ ಪೇಪರ್ ಕ್ಯಾರಿ ಬ್ಯಾಗ್ ಉತ್ಪಾದನಾ ಘಟಕದ ಉದ್ಘಾಟನೆ ಜ. 9ರಂದು ಸಂಜೆ 4ಕ್ಕೆ ಇಲ್ಲಿನ ಬನಶಂಕರಿ ನಗರದಲ್ಲಿ ನಡೆಯಲಿದೆ.
ಪರಿಸರವಾದಿ ಡಾ. ಸಂಜೀವ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೆಎಸ್‌ಆರ್‌ಎಂಡಿಎಸ್ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಭೋವಿ ಭಾಗವಹಿಸುವರು. ಸಂಸ್ಥೆಯ ಮುಖ್ಯಸ್ಥ ಜ್ಯೋತಿ ಹಿರೇಮಠ ಅಧ್ಯಕ್ಷತೆ ವಹಿಸುವರು ಎಂದು ಚಂದ್ರು ಶಿವಯ್ಯನವರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಾರ್ಷಿಕ ಸಮ್ಮೇಳನ
ಧಾರವಾಡ: ಇಲ್ಲಿನ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜ. 9ರಂದು ಮಧ್ಯಾಹ್ನ 3ಕ್ಕೆ ವೈ.ಬಿ. ಅಣ್ಣಿಗೇರಿ ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಆಯೋಜಿಸಲಾಗಿದೆ. ಮಾಜಿ ಸಂಸದ ಮಂಜುನಾಥ ಕುನ್ನೂರು ಉದ್ಘಾಟಿಸುವರು. ನಾಗೇಶ ಅಣ್ಣಿಗೇರಿ ಅಧ್ಯಕ್ಷತೆ ವಹಿಸುವರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣೇಶ ಪೂಜಾರ, ಪ್ರಾಚಾರ್ಯ ಪ್ರೊ.ವಿ.ಕೆ. ಕುಂಬಿ ಭಾಗವಹಿಸುವರು.
ಇಂದು ಉಪನ್ಯಾಸ
ಧಾರವಾಡ: ಶ್ರೀ ರಘುಪ್ರಿಯ ತೀರ್ಥರ ಆರಾಧನೆ ನಿಮಿತ್ತ ಇಲ್ಲಿನ ಕೆಲಗೇರಿ ರಸ್ತೆಯ ಬಳಿಯ ಶ್ರೀ ಮಾಧ್ವ ವಿದ್ಯಾಪೀಠದಲ್ಲಿ ಜ. 9 ರಂದು ಸಂಜೆ 6.30ಕ್ಕೆ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.