ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

14ರಂದು ಬಸವಣ್ಣ ದೇವರ ಜಾತ್ರೆ

Rashmi Kasaragodu
Updated On : 12 Jan 2014, 1:43 am

ಕಲಘಟಗಿ: ತಾಲೂಕಿನ ಸಂಗಮೆಶ್ವರ ಗ್ರಾಮದ ಬಳಿಯ ಶಾಲ್ಮಲಾ ಹಾಗೂ ಬೆಡ್ತಿ ಹಳ್ಳಗಳ ಕೂಡಲ ಸಂಗಮ ಕ್ಷೇತ್ರದಲ್ಲಿರುವ ಶ್ರೀಬಸವಣ್ಣ ದೇವರ ಜಾತ್ರಾ ಮಹೋತ್ಸವ ಜ. 14ರಿಂದ 16ರವರೆಗೆ ನಡೆಯಲಿದೆ.  ಹನ್ನೆರಡುಮಠದ ಶ್ರೀ ರೇವಣಸಿದ್ದ ಶ್ರೀಗಳು ಹಾಗೂ ರಾಯನಾಳದ ಶ್ರೀ ಮಹಾಂತ ಶ್ರೀಗಳು ಸಾನ್ನಿಧ್ಯವಹಿಸಲಿದ್ದಾರೆ. ಜ. 14ರಂದು ಬೆಳಗ್ಗೆ ಷಟಸ್ಥಲ ಧ್ವಜಾರೋಹಣ, ರುದ್ರಾಭಿಷೇಕ,  ಜ. 15ರಂದು ಮಧ್ಯಾಹ್ನ 2 ಗಂಟೆಗೆ ಧರ್ಮ ಸಭೆ, ಸಂಜೆ 4ಕ್ಕೆ ರಥೋತ್ಸವ ಜರುಗಲಿದೆ. ಜ. 16ರಂದು ಕಡುಬಿನ ಕಾಳಗ, ಜಾನುವಾರುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
14ರಂದು ಬೆಣಚಿಕೆರಿ ಜಾತ್ರೆ
ಕಲಘಟಗಿ: ತಾಲೂಕಿನ  ತುಮರಿಕೊಪ್ಪ ಗ್ರಾಮದ ಬಳಿಯ ಬೆಣಚಿಕೆರಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಜ. 14ರಂದು ನಡೆಯಲಿದೆ. ಬೆಳಗ್ಗೆ 11ಕ್ಕೆ ಸ್ಥಳೀಯ ಹನ್ನೆರಡುಮಠದ ರೇವಣಸಿದ್ದ ಶಿವಾಚಾರ್ಯ ಶ್ರೀ ಸಾನ್ನಿಧ್ಯದಲ್ಲಿ ಬಸವಣ್ಣ ದೇವರ ರುದ್ರಾಭಿಷೇಕದೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಸುತ್ತಲಿನ ಗ್ರಾಮಸ್ಥರು ಪಾಲ್ಗೊಳ್ಳುವಂತೆ ಕೋರಲಾಗಿದೆ.ಇಂದು ಪ್ರಶಸ್ತಿ ವಿತರಣೆ
ಹುಬ್ಬಳ್ಳಿ: ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಬಾಲಕಿಯರ ಪ್ರೌಢಶಾಲೆಯ 44ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭ ಜ. 12ರಂದು ಬೆಳಗ್ಗೆ 8:30ಕ್ಕೆ ನಡೆಯಲಿದೆ.  ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಕಿರುತೆರೆ ಅಭಿನೇತ್ರಿ ಶಿಲ್ಪಾ ಹುಲಗಮ್ಮನವರ ಆಗಮಿಸುವರು. ಲ್ಯಾಮಿಂಗ್ಟನ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಬಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement