ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆಮ್ ಆದ್ಮಿ ಸದಸ್ಯತ್ವ ಅಭಿಯಾನ

Rashmi Kasaragodu
Updated On : 12 Jan 2014, 1:43 am

ಹುಬ್ಬಳ್ಳಿ: ಆಮ್ ಆದ್ಮಿ ಹವಾ ಧಾರವಾಡ ಜಿಲ್ಲೆಯಲ್ಲೂ ಪಸರಿಸುತ್ತಿದೆ. ಮೈಭಿ ಆಮ್ ಆದ್ಮಿ (ನಾನು ಜನ ಸಾಮಾನ್ಯ) ಎಂಬ ಶೀರ್ಷಿಕೆಯಡಿ ಧಾರವಾಡ ಜಿಲ್ಲಾ ಆಮ್ ಆದ್ಮಿ ಘಟಕ ಉಚಿತ ಸದಸ್ಯತ್ವ ಅಭಿಯಾನ ಆರಂಭಿಸಿದೆ.
ಹುಬ್ಬಳ್ಳಿಯಲ್ಲಿ ಶನಿವಾರ ದುರ್ಗದ ಬೈಲ್, ಕೇಶ್ವಾಪುರದ ಫಾತಿಮಾ ಸ್ಕೂಲ್ ಬಳಿ ಸದಸ್ಯತ್ವ ಅಭಿಯಾನ ನಡೆಯಿತು. ಅನೇಕರು ಆಮ್ ಆದ್ಮಿ ಸದಸ್ಯತ್ವ ಪಡೆದು ಬೆಂಬಲ ಸೂಚಿಸಿದರು. ಜಿಲ್ಲಾ ಸಂಚಾಲಕ ಶೈಲೇಂದ್ರಕುಮಾರ ಪಾಟೀಲ ಮಾತನಾಡಿ, ಜಿಲ್ಲೆಯ ಎಲ್ಲ ವಾರ್ಡ್, ತಾಲೂಕು, ಗ್ರಾಮಸಭೆ, ಪುರಸಭೆ ವ್ಯಾಪ್ತಿಯಲ್ಲಿ ಜನತೆ ಉಚಿತ ಅಭಿಯಾನದ ಸದುಪಯೋಗ ಪಡೆಯಿರಿ. ಜ. 26ರ ವರೆಗೆ ಅಭಿಯಾನ ನಡೆಯಲಿದ್ದು, ಅರ್ಜಿಯಲ್ಲಿ ಹೆಸರು, ವಿಳಾಸ, ವಿಧಾನಸಭೆ ಕ್ಷೇತ್ರ, ಫೋನ್ ನಂಬರ್ ಬರೆದು ಸಹಿ ಮಾಡಿ ರಸೀದಿ ಪಡೆದು ಉಚಿತವಾಗಿ ಸದಸ್ಯರಾಗಬಹುದು. ಅರವಿಂದ ಕೇಜ್ರಿವಾಲ್ರ ಮೂರು ರುಪಾಯಿ ಟೋಪಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ 1 ಲಕ್ಷಕ್ಕೂ ಅಧಿಕ ಟೋಪಿಗಳನ್ನು ಬರುವ ದಿನಗಳಲ್ಲಿ ಹಂಚಲಾಗುವುದು. ಸದಸ್ಯತ್ವ ಸಹಾಯಕ್ಕೆ ನೋಂದಣಿ ಸಹಾಯವಾಣಿ ಕಲ್ಪಿಸಲಾಗಿದ್ದು, 9632432476, 9632432876, 9632432896 ನಂಬರ್ಗೆ ಕರೆ ಮಾಡಿ ಸಹಾಯ ಪಡೆಯಬಹುದೆಂದು ತಿಳಿಸಿದರು.
ರಾಜು ಮಿಸ್ಕಿನ್, ಅರುಣಕುಮಾರ, ಅಫ್ಜಲ್ ಖಾಜಿ, ಅಯುಬ ಖಾನ್, ಅನಂತಕೃಷ್ಣ, ಅವಿನಾಶ, ಅನಿಲ ದೇಸಾಯಿ, ಪಪ್ಪು ಅಗರವಾಲ್, ವಿಶ್ವನಾಥ, ವಿನೋದ, ಕಿರಣ, ಸಂಜಯ, ಜ್ಯೋತಿಬಾ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement