ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಿಸರ್ಗದಿಂದ ಎಲ್ಲರಿಗೂ ಸಮಾನ ಹಕ್ಕು: ನ್ಯಾ. ಬನ್ನೂರಮಠ

Rashmi Kasaragodu
Updated On : 12 Jan 2014, 1:42 am

ಹುಬ್ಬಳ್ಳಿ: ಪ್ರಾಕೃತಿಕವಾಗಿ ಸಮಾನವಾಗಿರುವ ಎಲ್ಲ ಮಾನವರಿಗೆ ನಿಸರ್ಗ ಸಮಾನವಾಗಿ ಕೆಲವು ಹಕ್ಕುಗಳನ್ನು ನೀಡಿದೆ ಎಂದು ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಎಸ್.ಆರ್. ಬನ್ನೂರಮಠ ಹೇಳಿದರು.
ಶನಿವಾರ, ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳು, ಜನಸಾಮಾನ್ಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ಇತಿಹಾಸ ವೇದಗಳ ಕಾಲದಿಂದ ಆರಂಭವಾಗುತ್ತದೆ. ಜೀವಿಸುವ ಹಕ್ಕು, ಸ್ವಾತಂತ್ರ್ಯದ ಹಕ್ಕು ಮತ್ತು ಸುಖ ಸಂತೋಷದ ಜೀವನ ನಡೆಸುವ ಹಕ್ಕು ಮುಂತಾದವು ನಿಸರ್ಗ ಎಲ್ಲರಿಗೂ ಸಮಾನವಾಗಿ ನೀಡಿದೆ. ಈ ಹಕ್ಕುಗಳಿಲ್ಲದೆ ಜೀವನ ಅಸಾಧ್ಯ. ಈ ಹಕ್ಕುಗಳು ಮಾನವನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಲಿಂಗ, ಜಾತಿಯ ಎಂಬ ತಾರತಮ್ಯವಿಲ್ಲದೆ ನಿಸರ್ಗ ಎಲ್ಲರಿಗೂ ಸಮಾನವಾಗಿ ಈ ಹಕ್ಕುಗಳನ್ನು ನೀಡಿದೆ ಎಂದರು.
ರಾಜ್ಯ ಮಾನವ ಹಕ್ಕುಗಳ ಆಯೋಗ ಸದಸ್ಯ ಸಿ. ಜಿ. ಹುನಗುಂದ, ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಹಕ್ಕುಗಳ ಸಂರಕ್ಷಣೆ ಜನರ ಹಾಗೂ ಮಾನವ ಹಕ್ಕುಗಳ ಆಯೋಗದ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ಮಾನವ ಹಕ್ಕುಗಳ ಅರಿವು ಹಾಗೂ ತಿಳಿವಳಿಕೆ ಮೂಡಿಸುವುದು ಎಲ್ಲರ ಕರ್ತವ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಆರ್. ಸುಬ್ರಮಣ್ಯ, ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಮಾದ್ಯಮ, ಸರ್ಕಾರ, ಸರ್ಕಾರೇತರ ಸಂಸ್ಥೆಗಳ ಪಾತ್ರದ ಕುರಿತು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement