ಲೈಂಗಿಕ ಹಲ್ಲೆ: ಆರೋಪಿ ಸೆರೆ
ಧಾರವಾಡ: ಗರಗ ಠಾಣೆ ವ್ಯಾಪ್ತಿ ಬೋಗೂರು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದೆ. ಜ. 7ರಂದು ಗ್ರಾಮದ 15 ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಅದೇ ಗ್ರಾಮದ ಸಿದ್ದಪ್ಪ ಕಲ್ಲಪ್ಪ ಒಡೆಯರ (20)ನನ್ನು ಪೊಲೀಸರು ಶುಕ್ರವಾರ ಬಂಧಿಸಿ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.
ಪೊಲೀಸ್ ಪೇದೆ ಅಮಾನತು?
ಕುಂದಗೋಳ: ತಾಲೂಕಿನ ಪಶುಪತಿಹಾಳ ಗ್ರಾಮದ ಪೊಲೀಸ್ ಪೇದೆಯಾದ ಶಿವಾನಂದ ಶಾಂತವೀರಪ್ಪ ಕಟಗಿ ಎಂಬವರು, ಅವರ ಮಾವ ಶಂಕರಗೌಡ ಜಾವೂರ ಹಾಗೂ ಚಿಕ್ಕಮ್ಮ ಮಂಜುಳಾ ಜಾವೂರ ಮೇಲೆ ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದ ಇವರಿಬ್ಬರು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಕುರಿತಂತೆ ಪೊಲೀಸ್ ಪೇದೆ ಶಿವಾನಂದ ಶಾಂತವೀರಪ್ಪ ಕಟಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.