ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆ ಮಕರ ಸಂಕ್ರಮಣ

Lingaraj Badiger
Updated On : 13 Jan 2014, 12:42 pm

ಧಾರವಾಡ: ಹೆಬ್ಬಳ್ಳಿ ರಸ್ತೆಯಲ್ಲಿನ ಮಣಿಕಂಠನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜ. 14ರಂದು ಮಕರ ಸಂಕ್ರಮಣ ಉತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7ರಿಂದ 11.30ರ ವರೆಗೆ ಅಯ್ಯಪ್ಪಸ್ವಾಮಿಗೆ ತುಪ್ಪದಾಭಿಷೇಕ, ಮಧ್ಯಾಹ್ನ 12ಕ್ಕೆ ಆರತಿ, ಮಧ್ಯಾಹ್ನ 3ಕ್ಕೆ ಅಗ್ನಿ ಕುಂಡಕ್ಕೆ ಅಗ್ನಿ ಪ್ರಜ್ವಲಿಸುವುದು. ಸಾಯಂಕಾಲ 4ಕ್ಕೆ ನಗರೇಶ್ವರ ಗುಡಿಯಿಂದ ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ, 6ಕ್ಕೆ ಪುಷ್ಪಾಲಂಕಾರ, 7ಕ್ಕೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಜರುಗಲಿದೆ.
ನಾಳೆ ಎಸ್‌ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಔಷಧ ಗುಣಶಾಸ್ತ್ರ ವಿಭಾಗದ, ಡಾ. ಎಂ.ಬಿ. ಗಿರೀಶ ಜ. 14ರ ಸಂಜೆ 6: 50ರಿಂದ 7.20ರವರೆಗೆ  ಆಹಾರದಲ್ಲಿ ಅಯೋಡೀನ್ ಅವಶ್ಯಕತೆ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು 0836 2443414 ಅಥವಾ 2443415 ಅಥವಾ 2443416 ಸಂಪರ್ಕಿಸಬಹುದು.
ಭಾವಗೀತೆ ಗಾಯನ ಸಂಜೆ
ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಇಲ್ಲಿನ ಸಾಧನಕೇರಿಯಲ್ಲಿನ ಬೆಂದ್ರೆ ಭವನದಲ್ಲಿ ಜ. 15ರಂದು ಸಂಜೆ 6ಕ್ಕೆ ಭಾವಗೀತೆ ಗಾಯನ ಸಂಜೆ ಆಯೋಜಿಸಲಾಗಿದೆ. ಗಾಯಕರಾದ ಇಂದಿರಾ ಮಳಗಿ ಭಾವಗೀತೆಗಳನ್ನು ಪ್ರಸ್ತುತಪಡಿಸುವರು. ಟ್ರಸ್ಟ್ ಸಂಚಾಲಕ ನರಸಿಂಹ ಪರಾಂಜಪೆ, ಸಹಕಾರ್ಯದರ್ಶಿ ಬಿ.ಡಿ. ಹಿರೇಗೌಡರ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಸ್ನೇಹ ಸಮ್ಮೇಳನ
ಧಾರವಾಡ: ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಜ. 13ರಂದು ಬೆಳಗ್ಗೆ 10:30ಕ್ಕೆ ಜಯದೇವಿತಾಯಿ ಬಾಲಿಕೆಯರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಆಯೋಜಿಸಲಾಗಿದೆ. ಜಿ.ಜಿ. ದೊಡವಾಡ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೆ.ಎಂ. ಅಂಗಡಿ, ಡಾ. ವಿ.ವಿ. ಹೆಬ್ಬಳ್ಳಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ನಂದಾಗೆ 9ನೇ ರ್ಯಾಂಕ್
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಬಿ.ಇಡಿ. ಪದವಿ ಪರೀಕ್ಷೆಯಲ್ಲಿ ಸೋನಿಯಾ ಶಿಕ್ಷಣ ಸಂಸ್ಥೆಯ ನಂದಾ ನಾಡಗೌಡ ಅವರು 9ನೇ ರ್ಯಾಂಕ್ ಪಡೆದಿದ್ದಾರೆ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ವಿ. ಡಂಬಳ, ಪ್ರಾಚಾರ್ಯ ಡಾ. ಎಸ್.ಎಸ್. ಹಿರೇಮಠ ಹಾಗೂ ಸಂಸ್ಥೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.
ಇಂದು ಪ್ರತಿಭಟನೆ
ಧಾರವಾಡ: ಕೆಪಿಎಸ್ಸಿ ಭ್ರಷ್ಟಾಚಾರ, ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಜ. 13ರಂದು ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ವಿಳಂಬ, ಭ್ರಷ್ಟಾಚಾರ ನಡೆಯುತ್ತಿದೆ ಅಲ್ಲದೆ, ಕೆಪಿಎಸ್ಸಿಯಲ್ಲೂ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ಈ ಹಿನ್ನೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಶಿವು ಗುಂಡ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement