ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಪಘಾತ: ಇಬ್ಬರಿಗೆ ಗಾಯ

Rashmi Kasaragodu
Updated On : 14 Jan 2014, 1:05 am

ಕಲಘಟಗಿ: ಇಲ್ಲಿನ ಹಳಿಯಾಳ ರಸ್ತೆಯ ಸಂಗಮೇಶ್ವರ ಕ್ರಾಸ್ ಬಳಿ ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.  ಘಟನೆಯಲ್ಲಿ     ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳ ಹೆಸರು ತಿಳಿದು ಬಂದಿರುವುದಿಲ್ಲ. ಈ ಕುರಿತಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಲಿಂಡರ್ ಸ್ಫೋಟ: ಮೂವರಿಗೆ ಗಾಯ
ಧಾರವಾಡ: ಇಲ್ಲಿನ ಆದರ್ಶ ನಗರದ ಕುಸುಗಲ್ ಪ್ಲಾಟ್ ಬಡಾವಣೆಯ ಮನೆಯೊಂದರಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ಒಬ್ಬ ಮಹಿಳೆ ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಕುಸಗಲ್ ಬಡಾವಣೆಯ ನಿವಾಸಿಗಳಾದ ದಾದಾಫೀರ್ ಅಹ್ಮದ ಮುಲ್ಲಾ, ಸೀಮಾ ಮುಲ್ಲಾ ಹಾಗೂ ಪಕ್ಕದ ಮನೆಯ ಸದ್ದಾಂ ಪಟೇಲ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಸಿಲಿಂಡರ್ ಸ್ಫೋಟಕ್ಕೆ ಮನೆಯಲ್ಲಿನ ಕಿಟಕಿ, ಬಾಗಿಲು ಹಾಗೂ ಗೋಡೆಗಳು ಉರುಳಿ ಬಿದ್ದಿವೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇಕೀ ಧ್ಯಾನಯೋಗ ಶಿಬಿರ
ಧಾರವಾಡ: ಇಲ್ಲಿನ ಗಾಂಧಿಚೌಕದಲ್ಲಿರುವ ಶಂಕಾರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಜ. 17 ರಿಂದ 21ರ ವರೆಗೆ ಪ್ರತಿದಿನ ಸಂಜೆ 5ರಿಂದ 7ರ ವರೆಗೆ ರೇಕೀ ಧ್ಯಾನಯೋಗ ಹಾಗೂ ಪ್ರಾಣಾಯಾಮ ಶಿಬಿರ ಹಮ್ಮಿಕೊಳ್ಳಲಾಗಿದೆ. ದೀರ್ಘ ಕಾಯಿಲೆಗಳಾದ ಅಸ್ತಮಾ, ಹೃದಯ ತೊಂದರೆ, ರಕ್ತದೊತ್ತಡ, ಮಧುಮೇಹ, ಬೆನ್ನು ನೋವು, ತಲೆನೋವು, ಭಯ ನಿವಾರಣೆಗಾಗಿ ಚಿಕಿತ್ಸೆ, ಪರಿಹಾರಗಳನ್ನು ಈ ಶಿಬಿರದಲ್ಲಿ ತಿಳಿಸಿಕೊಡಲಾಗುವುದು. 12 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಮಾಹಿತಿಗೆ ಮೊ. 99006-80778 ಸಂಪರ್ಕಿಸಿ.
ವಚನ ಸಂಗೀತ
ಧಾರವಾಡ: ಡಾ.ಆರ್.ಸಿ. ಹಿರೇಮಠ ದತ್ತಿ ಅಂಗವಾಗಿ ಇಲ್ಲಿನ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಜ. 15ರ ಸಂಜೆ 6ಕ್ಕೆ ವಚನ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಡಾ. ಸದಾಶಿವ ಮರ್ಜಿ ಅಧ್ಯಕ್ಷತೆ ವಹಿಸುವರು. ಗಾಯಕ ಶಿವಕುಮಾರ ಪಾಟೀಲ ವಚನ ಸಂಗೀತ ಪ್ರಸ್ತುತಪಡಿಸುವರು.
ಗೀತ ಗಾಯನ
ಧಾರವಾಡ: ಇಲ್ಲಿನ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜ. 17 ರಂದು ಸಂಜೆ 6ಕ್ಕೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕವಿ ಜಯಂತ ಕಾಯ್ಕಿಣಿ ಅತಿಥಿಯಾಗಿದ್ದು, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುವರು. ಶ್ರೀಕಾಂತ ಕುಲಕರ್ಣಿ ಸಂಗೀತ ಸಂಯೋಜನೆ ಮಾಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement