ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿ: ನಲ್ಲಿಯಿಂದ ಚರಂಡಿ ನೀರು...

Rashmi Kasaragodu
Updated On : 14 Jan 2014, 1:05 am

ಹುಬ್ಬಳ್ಳಿ: ಗಣೇಶಪೇಟೆ ಕುಲಕರ್ಣಿ ಹಕ್ಕಲದಲ್ಲಿ ಕುಡಿಯುವ ನೀರಿನ ನಲ್ಲಿಯಿಂದ ಚರಂಡಿ ಮಿಶ್ರಿತ ನೀರು ಬಂದಿದ್ದನ್ನು ಪ್ರತಿಭಟಿಸಿ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಜಲಮಂಡಳಿ ಈ ಭಾಗಕ್ಕೆ ಸೋಮವಾರ ಕುಡಿಯುವ ನೀರು ಪೂರೈಸಿತ್ತು. ಎಂದಿನಂತೆ ಕುಡಿಯುವ ನೀರು ತುಂಬಲು ಹೋದ ಜನತೆಗೆ ಆಘಾತ ಕಾದಿತ್ತು. ನಲ್ಲಿಯಿಂದ ಚರಂಡಿ ಮಿಶ್ರಿತ ನೀರು ಬರುತ್ತಿದ್ದು. ಸಾಲದ್ದಕ್ಕೆ ಕೆಟ್ಟ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಪಾಲಿಕೆಯ ಕಂಟ್ರೋಲ್ ರೂಮ್ಗೆ ಕರೆ ಮಾಡಿ ದೂರಿದರು. ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಇದನ್ನು ಪ್ರತಿಭಟಿಸಿದ ನಿವಾಸಿಗಳು ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಮೇಲಿಂದ ಮೇಲೆ ಗಣೇಶಪೇಟೆ ಭಾಗದಲ್ಲಿ ನಲ್ಲಿಯಿಂದ ಚರಂಡಿ ನೀರು ಬರುತ್ತಿದೆ. ಈ ಬಗ್ಗೆ ಅನೇಕ ಬಾರಿ ದೂರಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ದೂರಿದರು. ನಿವಾಸಿಗಳು ಪ್ರತಿಭಟನೆ ಮಾರ್ಗ ಅನುಸರಿಸಿದರೂ ಅಧಿಕಾರಿಗಳು ಮಾತ್ರ ಇತ್ತ ಹಾಯಲೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement