ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಾಜ್ಯಮಟ್ಟಕ್ಕೆ ವಂಟಕುದರಿ ಆಯ್ಕೆ

Lingaraj Badiger
Updated On : 16 Jan 2014, 10:48 am

ಧಾರವಾಡ: ನವನಗರ ಪ್ರಾದೇಶಿಕ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭರತ ವಂಟಕುದರಿ ಬೆಂಗಳೂರಿನಲ್ಲಿ ಜ. 17 ರಿಂದ ಮೂರು ದಿನಗಳ ಕಾಲ ನಡೆಯುವ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಟೆನಿಸ್ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭರತ ಮೊದಲ ಸ್ಥಾನ ಪಡೆದರೆ, ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಶರತ್ ಬಾಬು 2ನೇ ಸ್ಥಾನ ಪಡೆದಿದ್ದರು. ಭರತ ವಂಟಕುದರಿ ಡಬಲ್ಸ್ ಸ್ಪರ್ಧೆಯಲ್ಲಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ನಾಣಿಯಪ್ಪ ಅವರ ಜೊತೆಗೂಡಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
--
ಅಂತಾರಾಷ್ಟ್ರೀಯ ಸಮ್ಮೇಳನ ಇಂದಿನಿಂದ  
ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಬಿವಿಬಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ 'ಎಂಜಿನಿಯರಿಂಗ್ ಶಿಕ್ಷಣದಲ್ಲಾದ ಬದಲಾವಣೆಗಳು' ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ಜ. 16ರಿಂದ 18ರವರೆಗೆ ಸಮ್ಮೇಳನ ನಡೆಯಲಿದೆ. 16ರಂದು ಸಂಜೆ 5 ಗಂಟೆಗೆ ಬಿವಿಬಿ ಬಯೋಟೆಕ್ ಅಡಿಟೋರಿಯಮ್‌ನಲ್ಲಿ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಆರ್. ನಟರಾಜನ್ ಸಮ್ಮೇಳನಕ್ಕೆ ಚಾಲನೆ ನೀಡುವರು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ ಮಾಜಿ ಉಪಾಧ್ಯಕ್ಷ, ಪದ್ಮವಿಭೂಷಣ ಡಾ. ಎಫ್. ಸಿ. ಕೊಲ್ಹಿ, ನ್ಯಾಕ್ಯಾಸ್ಲೆ ವಿಶ್ವವಿದ್ಯಾಲಯದ ಡಾ. ಸುಗತಾ ಮಿತ್ರಾ ಸಮ್ಮೇಳನದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ. ಸಮ್ಮೇಳನದ ಸಂಯೋಜಕರಾದ ಡಾ. ಅಶೋಕ ಶೆಟ್ಟರ್, ಡಾ. ಕೃಷ್ಣ ವೇದುಲ ಪಾಲ್ಗೊಳ್ಳುವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಬದಲಾವಣೆ ತಂದ ನಾಯಕರ ಸಮಾಗಮಕ್ಕೆ ಈ ಸಮ್ಮೇಳನ ವೇದಿಕೆಯಾಗಲಿದೆ. ಇಂಡೋ-ಯುಸ್ ಕೊಲಾಬರೇಶನ್ ಫಾರ್ ಎಂಜಿನಿಯರಿಂಗ್ ಎಜ್ಯುಕೇಶನ್, ಇಂಟರ್ ನ್ಯಾಶನಲ್ ಫೆಡರೇಶನ್ ಆಫ್ ಎಂಜಿನಿಯರಿಂಗ್ ಎಜ್ಯುಕೇಶನ್ ಸೊಸಾಯಿಟಿ ಸಹಭಾಗಿತ್ವದಲ್ಲಿ ಸಮ್ಮೇಳನ ನಡೆಯಲಿದೆ. ದೇಶ ವಿದೇಶಗಳಿಂದ ಸುಮಾರು 400 ಎಂಜಿನಿಯರಿಂಗ್ ಶಿಕ್ಷಣ ತಜ್ಞರು-ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಈ ಸಮ್ಮೇಳನದಲ್ಲಿ ಹಿರಿಯ ತಜ್ಞರಿಂದ ಪ್ರಮುಖ ವಿಷಯಗಳ ಮೇಲೆ ಭಾಷಣ, ಚರ್ಚಾಕೂಟ, ಪ್ರಬಂಧ ಮಂಡನೆ ಹಾಗೂ ಕಾರ್ಯಾಗಾರ ನಡೆಯಲಿದೆ. ಎಂಜಿನಿಯರಿಂಗ್ ಶಿಕ್ಷಣದಲ್ಲಾದ ಸಂಶೋಧನೆಗಳ ಬಗ್ಗೆ ಸುಮಾರು 90 ಪ್ರಬಂಧಗಳು ಮಂಡನೆಯಾಗಲಿವೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement