ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಳಸಾ ಹಳ್ಳದ ಬಳಿ ಸಂಕ್ರಾಂತಿ ಆಚರಣೆ

Lingaraj Badiger
Updated On : 17 Jan 2014, 10:49 am

ಹುಬ್ಬಳ್ಳಿ: ಧಾರವಾಡ, ಬೆಳಗಾವಿ ಜಿಲ್ಲೆಯ ಕಳಸಾ ಹೋರಾಟ ಸಮನ್ವಯ ಸದಸ್ಯರು ಈ ಬಾರಿ ಮಕರ ಸಂಕ್ರಾಂತಿಯನ್ನು ಕಳಸಾ ಹಳ್ಳದಲ್ಲಿ ಆಚರಿಸಿದರು. ಕಳಸಾ ಹಳ್ಳದಲ್ಲಿ ಸ್ನಾನ ಮಾಡಿದ ಕಾರ್ಯಕರ್ತರು, ಕಣಕುಂಬಿ ಬಳಿ ನಡೆಯುತ್ತಿರುವ ಕಳಸಾ ಹಳ್ಳದ ತಿರುವು ಯೋಜನೆ ಕಾಮಗಾರ್ನಿ ಹಾಗೂ ಕಳಸಾ ಡ್ಯಾಮ ಸೈಟ್, ಚೋರಲಾ, ಪೋಟ್ಲಾ ಹಳ್ಳಗಳ ಕಾಮಗಾರಿಗಳನ್ನು ವೀಕ್ಷಿಸಿದರು. ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಗೆ ಮೊದಲು ಪ್ರಧಾನಿ ಮನಮೋಹನ್ ಸಿಂಗ್, ಮಧ್ಯೆ ಪ್ರವೇಶಿಸಿ ನ್ಯಾಯಾಧೀಕರಣದಿಂದ ಮಧ್ಯಂತರ ಆದೇಶ ಹೊರಡಿಸಿ ರಾಜ್ಯಕ್ಕೆ ಅಗತ್ಯವಿರುವ 24 ಟಿಎಂಸಿ ನೀರು ಬಿಡುಗಡೆ ಮಾಡಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುವುದಕ್ಕೆ ತೀರ್ಮಾನಿಸಲಾಯಿತು.  ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಸಂಚಾಲಕ ವಿಕಾಸ ಸೊಪ್ಪಿನ, ವಿಠಲ ಕಮ್ಮಾರ, ಮುಖಂಡರಾದ ಮಹೇಶ ಪತ್ತಾರ, ಎಂ.ಬಿ. ಕಟ್ಟಿ, ವಿವೇಕಾನಂದ ಗೊಳಸಂಗಿಮಠ, ವಿಶ್ವನಾಥ ಗಿನಿಮಾವ್, ಗೂಳಪ್ಪ ಭಾವಿಕಟ್ಟಿ, ಶಿವಾನಂದ ದೊಡ್ಡವಾಡ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement