ಪಿಎಸ್ಐ ಬಂಡೆಗೆ ಶ್ರದ್ಧಾಂಜಲಿ
ಹುಬ್ಬಳ್ಳಿ: ಶೂಟರ್ ಮುನ್ನಾನೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಗಂಭೀರವಾಗಿ ಗಾಯಗೊಂಡು ಮೃತರಾದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರಿಗೆ ಗೌರಿ ಮಹಿಳಾ ಮಂಡಳದಿಂದ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪೊಲೀಸ್ ಕಾನ್ಸ್ಟೇಬಲ್ ಆಗಿ ವೃತ್ತಿ ಜೀವನ ಆರಂಭಿಸಿದ ಮಲ್ಲಿಕಾರ್ಜುನ ಬಂಡೆ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರು. ಮುಂಬೈ ಭೂಗತ ಜಗತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮುನ್ನಾ ಮತ್ತು ಆತನ ಸಹಚರರ ವಿರುದ್ಧ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಗಂಭೀರವಾಗಿ ಗಾಯಗೊಂಡು ಎಂಟು ದಿನ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಕೊನೆಗೆ ವೀರ ಮರಣವನ್ನಪ್ಪಿದ್ದಾರೆ ಎಂದು ಶ್ರದ್ಧಾಂಜಲಿ ಸಭೆಯಲ್ಲಿ ಮಲ್ಲಿಕಾರ್ಜುನ ಬಂಡೆ ಅವರ ಸಾಹಸ ಕುರಿತು ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಗೌರಿ ಮಹಿಳಾ ಮಂಡಳ ಅಧ್ಯಕ್ಷೆ ಭುವನೇಶ್ವರಿ ಜಡೇಕರ್, ಮಂಜುಳಾ ಕದಂ, ಕಾರ್ಯದರ್ಶಿ ಇಂದುಮತಿ ಇಂಡಿ, ಉಪಕಾರ್ಯದರ್ಶಿ ಮಂಜುಳಾ ಕಬಾಡೆ, ಖಜಾಂಚಿ ಶಶಿಕಲಾ ಗಣಪಾ ಸೇರಿದಂತೆ ಇನ್ನಿತರರು ಇದ್ದರು.