ಕಳ್ಳತನ: ಆರೋಪಿ ಬಂಧನ
ಧಾರವಾಡ: ಕಲ್ಲಿನ ಕ್ವ್ವಾರಿಯಲ್ಲಿ ಕಬ್ಬಿಣದ ಸಲಕರಣೆಗಳನ್ನು ಕಳ್ಳತನ ಮಾಡುತ್ತಿದ್ದ ತಾಲೂಕಿನ ಮುಗದ ಗ್ರಾಮದ ವ್ಯಕ್ತಿಯನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಗದ ಗ್ರಾಮದ ಗಂಗಪ್ಪ ಚನಬಸಪ್ಪ ಕಾಳಗೌಡರ ಬಂಧಿತ ಆರೋಪಿ. ಮುಗದ ಪಕ್ಕದ ಮಂಡಿಹಾಳ ಗ್ರಾಮದ ಬಳಿಯಿರುವ ಬಿ.ಟಿ. ರೆಡ್ಡಿಅವರ ಕಲ್ಲಿನ ಕ್ವಾರಿಯಲ್ಲಿ ಕಳ್ಳತನ ಮಾಡಲು ಯತ್ನಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.