ನಾಟಕಹುಟ್ಟುತ್ತದೆ ಹುಟ್ಟಿಸಲುಅಸಾಧ್ಯ
ಧಾರವಾಡ: ನಾಟಕ ಹುಟ್ಟುತ್ತದೆ ಹೊರತು ಅದನ್ನು ಹುಟ್ಟಿಸಲು ಸಾಧ್ಯವಿಲ್ಲ. ಒಂದು ಪಕ್ಷ ಅದನ್ನು ಹುಟ್ಟಿಸಿದರೆ ಅದು ನಾಟಕವೆ ಅಲ್ಲ ಎಂದು ನಾಟಕಕಾರ ಕೆ.ಪಿ. ಅಕ್ಷರ ಅವರು ಅಭಿಪ್ರಾಯಿಸಿದರು. ಅವರು ಧಾರವಾಡ ಸಾಹಿತ್ಯ ಸಂಭ್ರಮ- 2014ರಲ್ಲಿ 'ನಾಟಕ ಕೃತಿ ಹುಟ್ಟುವ ರೀತಿ' ಎಂಬ ಮೊದಲ ಗೋಷ್ಠಿಯಲ್ಲಿ ಮಾತನಾಡಿದರು. ಒಂದು ಉತ್ತಮ ನಾಟಕಕ್ಕೆ ಸಮಾಜಿಕ ಹಿನ್ನೆಲೆ ಇರಬಾರದು. ಒಂದು ಪ್ರಸಂಗ ಬೆಳೆಯುತ್ತ ಹೋದಂತೆ ನಾಟಕವೂ ಬೆಳೆಯುತ್ತಾ ಹೋಗುತ್ತದೆ. ನಾಟಕಕ್ಕೆ ಹೆಟ್ಟು ಸಂಭಾಷಣೆ ಇರಬೇಕು, ಆಗ ಮಾತ್ರ ಅದರ ಘನತೆ ಹೆಚ್ಚುತ್ತದೆ. ಬಹಳ ಸಣ್ಣದಾದ ಸಂಭಾಷಣೆ ಇದ್ದರೆ, ನಾಟಕದ ಮಹತ್ವ ತಿಳಿಯುವುದಿಲ್ಲ. ಅದರ ಪೂರ್ಣ ಪಾಠವೂ ಅರ್ಥವಾಗುವುದಿಲ್ಲ. ಅದೆ ಮೂರ್ನಾಲ್ಕು ಪುಟಗಳ ಸಂಭಾಷಣೆ ಇದ್ದರೆ ನೋಡುಗನಿಗೂ ನಾಟಕ ತಿಳಿಯುತ್ತದೆ. ಹೀಗಾಗಿ ಯಾವುದೇ ನಾಟಕಕ್ಕೆ ಸಂಭಾಷಣೆ ಹೆಚ್ಚು ಹೆಚ್ಚಾಗಿರುವುದು ಅತಿಮುಖ್ಯ ಎಂದು ವಾದ ಮಂಡಿಸಿದರು. ನಂತರ ಮಾತನಾಡಿದ ಮತ್ತೋರ್ವ ನಾಟಕಕಾರ ನಾರಯಣಸ್ವಾಮಿ, ಯಾವುದೇ ನಾಟಕಕ್ಕೆ ಸ್ವಲ್ಪವಾದರೂ ಸಾಮಾಜಿಕ ಹಿನ್ನೆಲೆ ಇರಲೇಬೇಕು. ಕಾರಣ ನಾಟಕಗಳು ನಮ್ಮ ಜೀವನದ ಆಗುಹೋಗುಗಳನ್ನೆ ಎತ್ತಿ ಹಿಡಿಯುವಿದರಿಂದ ಸಮಾಜಿಕ ಪರಿಚಯ ಆ ನಾಟಕಕ್ಕೆ ಇರಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ಅರ್ಥದಲ್ಲಿ ಅದು ನಾಟಕವಾಗದೆ ಒಂದು ಕಥಯಾಗಿ ಅಭಿವ್ಯಕ್ತಗೊಳ್ಳುತ್ತದೆ ಎಂದು ಹೇಳಿದ ಅವರು, ಕಾಳಿದಾಸನ ಅಭಿಜ್ಞಾನ ಶಾಕುಂತಲಾ ನಾಟಕದಲ್ಲಿ ಅನೇಕರು ಕಾಳಿದಾಸನ ಪಾತ್ರವನ್ನು ಪರಿಚಯಿಸುತ್ತಾರೆ. ಅದು ಸಂಪೂರ್ಣ ತಪ್ಪು ಮತ್ತು ಅದಕ್ಕೆ ತಮ್ಮ ವಿರೋಧವಿದೆ ಎಂದರು. ನಾಟಕ ನಿರ್ದೇಶಕ ಬಸವಲಿಂಗಯ್ಯ ತಮ್ಮ ವಾದ ಮಂಡಿಸಿ, ನಾಟಕ ರಚಿಸಿದ ಬಳಿಕ ರಚನೆಕಾರ ಪಾತ್ರ ಏನೂ ಇಲ್ಲ. ನಾಟಕದ ಸ್ಕ್ರಿಪ್ಟ್ ನಿರ್ದೇಶಕನ ಕೈಗೆ ಸಿಕ್ಕಾಗ ಅದು ಬೇರೆ ರೂಪ ಪಡೆದುಕೊಳ್ಳುತ್ತದೆ. ಪಾಕ್ಷಧಾರಿಗಳು, ಸಂದರ್ಭಕ್ಕೆ ತಕ್ಕಂತೆ ನಾಟಕ ಪರದೆ ಮೇಲೆ ಮೂಡುತ್ತಾ ಹೋಗುತ್ತದೆ ಎಂದರು.