ಸಂಸದ ಜೋಶಿ ಧೋರಣೆ ಖಂಡನಾರ್ಹ
ಧಾರವಾಡ: ಕಮಲಾಪುರ ಪ್ರದೇಶದಲ್ಲಿ ನಡೆದ ಗಲಾಟೆ ಪ್ರಕರಣವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದ ಸಂಸದ ಪ್ರಹ್ಲಾದ ಜೋಶಿ ಅವರ ಧೋರಣೆ ಖಂಡನಾರ್ಹ ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಆರೋಪಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ಪ್ರಹ್ಲಾದ ಜೋಶಿ ಅವರು ಇಂದಿನವರೆಗೆ ಯಾವುದೇ ಗಲಾಟೆಯಾದರೂ ಸಹ ಬುದ್ಧಿಮಾತು ಹೇಳಿ ಬಗೆಹರಿಸಲು ಮುಂದಾಗಿಲ್ಲ. ಆದರೆ, ಇಂದು ಈ ಘಟನೆಗೆ ಸಂಬಂಧಿಸಿದಂತೆ ಕಪೋಲಕಲ್ಪಿತ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಅತ್ಯಂತ ಕೆಳ ಮಟ್ಟಕ್ಕೆ ಇಳಿಯುವುದು ಸರಿಯಾದುದ್ದಲ್ಲ ಎಂದು ಟೀಕಿಸಿದರು. ಅಂಜುಮನ್ ಉಪಾಧ್ಯಕ್ಷ ಖಲೀಲಹ್ಮದ ದಾಸನಕೊಪ್ಪ, ಮಹ್ಮದ ರಫೀಕ್ ಶಿರಹಟ್ಟಿ, ನ್ಯಾಯವಾದಿ ಜಾಫರ ಚೌಧರಿ, ಜಾವೇದ, ಬಾಬಾಶೇಖ ಸನದಿ, ಇಸ್ಮಾಯಿಲ್ ಮೋಕಾಶಿ ಇನ್ನಿತರರು ಇದ್ದರು.