ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಾಹಿತ್ಯದಲ್ಲಿ ಜನಪರ ಕಾಳಜಿಬೇಕು

Rashmi Kasaragodu
Updated On : 18 Jan 2014, 1:22 am

ಧಾರವಾಡ: ಸಾಮಾಜಿಕ ಮತ್ತು ಜನಪರ ಕಾಳಜಿ ಇಲ್ಲದ ಸಾಹಿತ್ಯ ಬಹಳ ದಿನಗಳ ಕಾಲ ಉಳಿಯುವುದಿಲ್ಲ ಎಂಬ ಅಭಿಪ್ರಾಯ ಯುವ ಸಾಹಿತಿಗಳಿಂದ ವ್ಯಕ್ತವಾಯಿತು. ಶುಕ್ರವಾರ ಕವಿವಿ ಆವರಣದಲ್ಲಿ ನಡೆದಿರುವ ಸಾಹಿತ್ಯ ಸಂಭ್ರಮದಲ್ಲಿ ಯುವ ಬರಹಗಾರರ ಸವಾಲುಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದ ಯುವ ಸಾಹಿತಿಗಳಾದ ಬಸವಣ್ಣೆಪ್ಪ ಕಂಬಾರ, ಚಿದಾನಂದ ಸಾಲಿ, ಟಿ.ಎಸ್. ಗೊರವರ, ಲಕ್ಕೂರ ಆನಂದ ಅವರು, ಬರಹಗಾರರು ಓದುಗರನ್ನು  ಸೆಳೆಯುವುದಕ್ಕೆ ಅಥವಾ ವಿಮರ್ಶಕರ ಓಲೈಕೆಗೆ ಬರೆಯದೇ ತಮಗಾಗಿ ಸಾಹಿತ್ಯ ರಚಿಸಬೇಕು ಎಂದು  ಹೇಳಿದರು. ಯುವ ಸಾಹಿತಿ ಚಿದಾನಂದ ಸಾಲಿ, ಹಲವು ಸಾಮಾಜಿಕ ಒತ್ತಡದ ಹಾಗೂ ತಲ್ಲಣಗಳ ಬದುಕಿನಲ್ಲಿ ಯುವ ಬರಹಗಾರರು ನಡೆಯುತ್ತಿದ್ದು, ಬಲಪಂಥ ಮತ್ತು ಎಡಪಂಥ ಎಂಬ ಎರಡೂ ದೋಣಿಯ ಮೇಲೆ ಕಾಲಿಡದೇ ಒಂದೇ ದಾರಿಯಲ್ಲಿ ಸಾಗಬೇಕು ಎಂದರು. ಯುವ ಸಾಹಿತಿ ಬಸವಣ್ಣೆಪ್ಪ ಕಂಬಾರ, ಯುವ ಬರಹಗಾರರು ತಮ್ಮ ಕತೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದರು. ಆಡುಭಾಷೆ ಮತ್ತು ಚಾಲ್ತಿ ಭಾಷೆ ಒಟ್ಟಿಗೆ ಬರೆಯುವ ರೂಢಿ ಬೆಳೆದಿದೆ ಎಂದ ಸಾಹಿತಿ ಟಿ.ಎಸ್. ಗೊರವರ, ಸಾಮಾಜಿಕ ತಾಣಗಳು ತಕ್ಷಣದ ಅಬ್ಬರಗಳಾಗಿದ್ದು, ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು. ಚ.ಹ. ರಘುನಾಥ ಗೋಷ್ಠಿ ನಿರ್ದೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement