ಸಾಹಿತ್ಯ ಸಂಭ್ರಮದಲ್ಲಿ ಇಂದು
ಧಾರವಾಡ: ಸಾಹಿತ್ಯ ಸಂಭ್ರಮದ ಮೂರನೇ ದಿನವಾದ ಭಾನುವಾರ ಬೆಳಗ್ಗೆ 10ಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಿಷಯ ಕುರಿತಾದ ಮೊದಲ ಗೋಷ್ಠಿ ನಡೆಯಲಿದೆ. 11ಕ್ಕೆ ಹಳೆಗನ್ನಡ ಕಾವ್ಯದ ಓದು ಯಾಕೆ ಬೇಕು ಎಂಬ ಗೋಷ್ಠಿ, ಮಧ್ಯಾಹ್ನ 12.15ರಿಂದ 1.30ರ ವರೆಗೆ ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ ಕುರಿತು ಎನ್.ಎ.ಎಂ. ಇಸ್ಮಾಯಿಲ್ ಮಾತನಾಡುವರು. 3ಕ್ಕೆ ಸಾಹಿತ್ಯಿಕ ಪ್ರಸಂಗಗಳು ಎಂಬ ವಿಷಯ ಕುರಿತಾಗಿ ಗೋಷ್ಠಿ ನಡೆಯಲಿದೆ. ಸಂಜೆ 4.15ಕ್ಕೆ ಸಾಹಿತಿಯೊಂದಿಗೆ ಈ ಸಂಜೆ ಗೋಷ್ಠಿಯಲ್ಲಿ ಎಸ್.ಎಲ್. ಭೈರಪ್ಪ ಭಾಗವಹಿಸುವರು. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.