ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಖಾದ್ರಿ ಅಚ್ಯುತನ್ಗೆ ಡಾ. ಪಾಪು ಪ್ರಶಸ್ತಿ

Rashmi Kasaragodu
Updated On : 21 Jan 2014, 12:43 pm

ಧಾರವಾಡ: ಪತ್ರಿಕೋದ್ಯಮದಲ್ಲಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ತಮ್ಮದೇ ಆದ ಛಾಪು ಮೂಡಿಸಿದ ಖಾದ್ರಿ ಅಚ್ಯುತನ್ ಅವರಿಗೆ 2013ನೇ ಸಾಲಿನ ಪ್ರತಿಷ್ಠಿತ ಡಾ. ಪಾಟೀಲ ಪುಟ್ಟಪ್ಪ ಪುರಸ್ಕಾರ ಲಭಿಸಿದೆ. ಡಾ. ಪಾಟೀಲ ಪುಟ್ಟಪ್ಪ ವಿಚಾರ ವೇದಿಕೆ ವತಿಯಿಂದ ಈ ಪುರಸ್ಕಾರ ನೀಡಲಾಗುತ್ತಿದೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜ. 22ರಂದು ಸಂಜೆ 6ಕ್ಕೆ ಖಾದ್ರಿ ಅಚ್ಯುತನ್ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅಚ್ಯುತನ್ ಅವರ ಪತ್ರಿಕೊದ್ಯಮದಲ್ಲಿನ ಸಾಧನೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದು, ಬೆಂಗಳೂರಿನಲ್ಲಿ ಅವರ ಸೇವೆ ಗುರುತಿಸಿ 2011ರಲ್ಲಿ ಬಾನುಲಿ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ, ನ್ಯೂಸ್ ಕೀಪರ್ಸ್ ಅಸೋಶಿಯೇಷನ್ ಪ್ರಶಸ್ತಿ, ತುಮಕೂರು ರೋಟರಿ ಕ್ಲಬ್ ಪ್ರಶಸ್ತಿ, ಅಲ್ಲದೇ ಇತ್ತೀಚೆಗೆ ಬೆಳಗಾವಿಯ ಎಚ್.ಆರ್. ಕುಲಕರ್ಣಿ ಪ್ರಶಸ್ತಿಗಳು ಬಂದಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement