ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗೋದಾಮಿನಲ್ಲಿ ಕಳ್ಳತನ: ಪ್ರಕರಣ ದಾಖಲು

Mainashree
Updated On : 21 Jan 2014, 12:26 pm

ಹುಬ್ಬಳ್ಳಿ: ಪೆಪ್ಸಿ ಕಂಪನಿಯ ಗೋದಾಮಿನ ಹಿಂಬದಿಯ ಕಿಟಕಿಯನ್ನು ತೆರೆದು ಒಳನುಗ್ಗಿದ ಕಳ್ಳರು ಸುಮಾರು ರು. 45 ಸಾವಿರ ಮೌಲ್ಯದ ಯಂತ್ರೋಪಕರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಹಳೆಹುಬ್ಬಳ್ಳಿ ವಿಕಾಸನಗರದಲ್ಲಿ ಸಂಭವಿಸಿದೆ. ನೆಕ್ಟರ್ ಬೆವರೇಜಿಸ್ ಪ್ರೈವೇಟ್ ಲಿಮಿಟೆಡ್‌ನಲ್ಲೇ ಈ ಕಳ್ಳತನ ನಡೆದಿದ್ದು, ರು. 25 ಸಾವಿರ ಮೌಲ್ಯದ ಯುಪಿಎಸ್ ಬ್ಯಾಟರಿ, ರು. 20 ಸಾವಿರ ಮೌಲ್ಯದ ಕ್ರೇವ್ಸ್ ಮತ್ತು ಬಾಕ್ಸ್‌ಗಳನ್ನು ಕಳ್ಳರು ದೋಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆ: ಅನಗತ್ಯವಾಗಿ ತೊಂದರೆ ಕೊಡುತ್ತಿರುವುದನ್ನು ಪ್ರಶ್ನಿಸಿದ ವ್ಯಕ್ತಿಗೆ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆವೊಡ್ಡಿದ ಘಟನೆ ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೆಟ್ಲಮೆಂಟ್‌ನ ಭೀಮಪ್ಪ ಇಂದರಗಿ ಎಂಬುವರಿಗೆ ಅದೇ ಪ್ರದೇಶದ ಈಶ್ವರಪ್ಪ ಹಾಗೂ ಬಸವರಾಜ ಎಂಬುವರು ಜೀವ ಬೆದರಿಕೆವೊಡ್ಡಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಆಭರಣ ಕಳುವು: ಶಾಪಿಂಗಿಗೆ ತೆರಳಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ರು. 48,200 ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಝರೀನಾಬೇಗಂ ಎಂಬುವರೇ ಚಿನ್ನಾಭರಣ ಕಳೆದುಕೊಂಡವರಾಗಿದ್ದಾರೆ. ಪ್ರಕರಣ ದಾಖಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement