ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಜೆಪಿ ಯುವ ಮೋರ್ಚಾದಿಂದ ಕ್ರಿಕೆಟ್

Mainashree
Updated On : 21 Jan 2014, 12:25 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 20
ಬಿಜೆಪಿ ಯುವ ಮೋರ್ಚಾ ರಾಷ್ಟ್ರದಾದ್ಯಂತ ನಡೆಸುತ್ತಿರುವ 'ಖೇಲೆಗಾ ಯುವ-ಜೀತೇಗಾ ಭಾರತ' ಕ್ರಿಕೆಟ್ ಟೂರ್ನಾಮೆಂಟ್ ಸೋಮವಾರದಿಂದ ಇಲ್ಲಿಯ ಬಿವಿಬಿ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡಿತು.
ಮಹಾನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ನಾಲ್ಕು ದಿನಗಳವರೆಗೆ (ಜ. 23ರ ವರೆಗೆ) ನಡೆಯಲಿರುವ ಈ ಟೂರ್ನಾಮೆಂಟ್‌ನಲ್ಲಿ  ಒಟ್ಟು 16 ತಂಡಗಳು ಸೆಣಸಲಿವೆ. ಪ್ರತಿ ದಿನ ನಾಲ್ಕು ಪಂದ್ಯ ನಡೆಯಲಿವೆ. ಇಲ್ಲಿ ಗೆಲ್ಲುವ ತಂಡ ರಾಜ್ಯಮಟ್ಟ ತಲುಪುತ್ತದೆ. ರಾಜ್ಯ ಮಟ್ಟದಲ್ಲಿ ಗೆಲ್ಲುವ ತಂಡ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪಾಲ್ಗೊಳ್ಳುವುದು. ಮಹಾನಗರ ಜಿಲ್ಲಾ ಬಿಜೆಪಿ ವ್ಯಾಪ್ತಿಯ ಹುಬ್ಬಳ್ಳಿ ಪೂರ್ವ ಮತ್ತು ಧಾರವಾಡ ಪಶ್ಚಿಮ ಯುವ ಮೋರ್ಚಾ ತಂಡಗಳು ಮೊದಲ ದಿನದ ಪ್ರಥಮ ಪಂದ್ಯವನ್ನಾಡಿದವು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು. ನಾಕೌಟ್ ಮಾದರಿಯಲ್ಲಿ ಪಂದ್ಯ ನಡೆಯಲಿದ್ದು, ಪ್ರತಿ ಪಂದ್ಯ 8 ಓವರ್‌ಗಳದ್ದಾಗಿದ್ದರೆ, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯ 10 ಓವರ್‌ಗಳಾಗಿರುತ್ತದೆ. ಟೂರ್ನಾಮೆಂಟ್‌ನ ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಮಾಜಿ ಮೇಯರ್ ಹಾಗೂ ಪಾಲಿಕೆ ಸದಸ್ಯ ಡಾ. ಪಾಂಡುರಂಗ ಪಾಟೀಲ, ರಂಗಾ ಬದ್ದಿ, ಶಿವಾನಂದ ಮುತ್ತಣ್ಣವರ, ವೀರೇಶ ಸಂಗಳದ, ಮಲ್ಲಿಕಾರ್ಜುನ ಸಾವಕಾರ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement