ಬ್ಯಾನರ್ ಹರಿತ: ಇಬ್ಬರ ಬಂಧನ
ಹುಬ್ಬಳ್ಳಿ: ಸ್ಥಳೀಯ ಟಿಪ್ಪು ನಗರದಲ್ಲಿ ಈದ್ಮಿಲಾದ್ ಹಬ್ಬದ ಅಂಗವಾಗಿ ಅಳವಡಿಸಲಾಗಿದ್ದ ಬ್ಯಾನರ್ನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಾಣತಿಕಟ್ಟಿಯ ಅಟೋ ಚಾಲಕ ರಮೇಶ ಕುಬೇರಪ್ಪ ಗಬ್ಬೂರ, ಸದಾಶಿವ ನಗರದ ಸಚಿನ ರಾಮಚಂದ್ರ ಖಾನಪೇಟರನ್ನು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ಶಿವಾನಂದ ಚಲವಾದಿ, ಸಿಬ್ಬಂದಿ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.