ವಿವಿಗಳಲ್ಲಿ ಸಂಶೋಧಕರ ಸಂಖ್ಯೆ ಕಡಿಮೆ: ಪ್ರೊ. ರಂಗಪ್ಪ
ಧಾರವಾಡ: ಇತ್ತೀಚೆಗೆ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಸಂಶೋಧಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರಿಂದ ಉನ್ನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕವಿವಿ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಟಿ. ನಂದಿಬೇವೂರ ಅವರ 60ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಇಂದು ಪ್ರತಿಭಾವಂತ ವಿಜ್ಞಾನಿಗಳು, ತಂತ್ರಜ್ಞರು, ಆಡಳಿತಗಾರರು, ಆರ್ಥಿಕ ತಜ್ಞರ ಅವಶ್ಯಕತೆ ಇದ್ದು, ವಿಶ್ವವಿದ್ಯಾಲಯಗಳು ಇಂತಹ ಮಾನವ ಸಂಪನ್ಮೂಲ್ನ ಸಜ್ಜುಗೊಳಿಸುವುದು ಅವಶ್ಯಕ ಎಂದರು.
ಪ್ರಾಧ್ಯಾಪಕ ಪ್ರೊ. ಎಸ್.ಟಿ ನಂದಿಬೇವೂರ ಅವರನ್ನು ಅಭಿನಂದಿಸಿ ಮಾತನಾಡಿದ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲದ ವಿಶ್ರಾಂತ ಕುಲಪತಿ ಪ್ರೊ. ಎಸ್.ಪಿ. ಹಿರೇಮಠ, ಶಿಕ್ಷಕನಿಗೆ ನಿವೃತ್ತಿ ಎಂಬುದು ಇರುವುದಿಲ್ಲ. ಆತ ಜೀವನಪೂರ್ತಿ ಕಲಿಕೆಯ ಜತೆಗೆ ಸಂಶೋಧಕನಾಗಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿ ಘನತೆಯನ್ನು ಕಾಪಾಡಿಕೊಂಡು ಬರಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ. ಬಿ.ಎಸ್. ಶರಿಗಾರ ಮಾತನಾಡಿ, ಪ್ರೊ. ಎಸ್.ಟಿ ನಂದಿಬೇವೂರ ಒಬ್ಬ ಅತ್ಯುತ್ತಮ ಸಂಶೋಧನಾ ಮಾರ್ಗದರ್ಶಕರು. ಅವರು ಸರಳ, ಸಜ್ಜನಿಕೆ, ಸೌಮ್ಯ ಸ್ವಭಾವದ ಕಠಿಣ ಪರಿಶ್ರಮಿ, ಆದರ್ಶ ಪ್ರಾಧ್ಯಾಪಕ ಎಂದು ಗುಣಗಾನ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಎಸ್.ಟಿ. ನಂದಿಬೇವೂರ, ತಮ್ಮ ಏಳ್ಗೆಗಾಗಿ ಶ್ರಮಿಸಿದ ತಂದೆ, ತಾಯಿ ಮತ್ತು ಕುಟುಂಬ ವರ್ಗ್ನ ಸ್ಮರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ, 60 ವರ್ಷಗಳ ನಂತರವೂ ಹಲವಾರು ಪ್ರಾಧ್ಯಾಪಕರು ಉತ್ಸಾಹದಿಂದ ಇಂದಿಗೂ ಸಂಶೋಧನೆ ನಡೆಸುತ್ತಿದ್ದಾರೆ. ಸಮಾಜದಲ್ಲಿ ಬದ್ಧತೆ ಕೊರತೆಯಿಂದಾಗಿ ಎಲ್ಲ ಕ್ಷೇತ್ರಗಳಲ್ಲಿ ನೈತಿಕ ಮೌಲ್ಯ ಕುಸಿಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರೊ. ಎಸ್.ಟಿ. ನಂದಿಬೇವೂರ ಅವರ ಅಭಿನಂದನಾ ಸಮಿತಿಯ ರು. 1 ಲಕ್ಷ ಠೇವಣಿ ಹಣವನ್ನು ವಿದ್ಯಾರ್ಥಿ ಶಿಷ್ಯವೇತನ, ಪ್ರೊ. ಎಸ್.ಟಿ. ನಂದಿಬೇವೂರ ಅವರ ಹೆಸರಿನಲ್ಲಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸ ಮಾಲಿಕೆಗೆ ರು. 50 ಸಾವಿರಗಳನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೀಡಿತು. ಇದೇ ಸಂದರ್ಭದಲ್ಲಿ ಅರುಣಾ ನಂದಿ ನಂದಿಬೇವೂರ ಅವರ 'ಶೀವಲೀಲಾಮೃತ' ಕೃತ್ನಿ ಲೋಕಾರ್ಪಣೆಗೊಳಿಸಲಾಯಿತು. ವಿಭಾಗದ ಮುಖ್ಯಸ್ಥ ಎಸ್.ಎ. ಚಿಮಟದಾರ, ಯೋಗ ಗುರು ಅನಿಲ ಅತ್ರೆ ಹಾಜರಿದ್ದರು. ಅಮೃತಾ ನಿರೂಪಿಸಿದರು. ಎನ್. ಆರ್. ಶೆಟ್ಟಿ ವಂದಿಸಿದರು.