ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಹಮಾಲರ ಪ್ರತಿಭಟನೆ

Vishwanath S
Updated On : 22 Jan 2014, 2:34 am

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಪಿಎಂಸಿ ಹಮಾಲಿ ಕಾರ್ಮಿಕ ಒಕ್ಕೂಟದ ವತಿಯಿಂದ ಜ. 22ರಂದು ಅಮರಗೋಳ ಎಪಿಎಂಸಿಗೆ ಹಮಾಲಿ ಕಾರ್ಮಿಕರು ಮುತ್ತಿಗೆ ಹಾಕಲಿದ್ದಾರೆ. ಆ ದಿನ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಹಮಾಲಿ ಕೆಲಸ ಸ್ಥಗಿತಗೊಳ್ಳುವುದರಿಂದ ರೈತರು ಹಾಗೂ ವ್ಯಾಪಾರಸ್ಥರು ಸಹಕರಿಸುವಂತೆ ಒಕ್ಕೂಟದ ಅಧ್ಯಕ್ಷ ಹನಮಂತಪ್ಪ ಜಾಲಗಾರ ಕೋರಿದ್ದಾರೆ.
ಕೀಲಿ ಮುರಿದು ಕಳ್ಳತನ
ಹುಬ್ಬಳ್ಳಿ: ಹಾಡಹಗಲೇ ಮನೆಯೊಂದರ ಕೀಲಿ ಮುರಿದು ಒಳಗೆ ನುಗ್ಗಿದ ಕಳ್ಳರು, ರು. 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗ ಘಟನೆ ವಿದ್ಯಾನಗರದ ಭಾರತಿ ಕಾಲನಿಯಲ್ಲಿ ನಡೆದಿದೆ. ಶಾರದಾ ಕಡಪಟ್ಟಿಮಠ ಎಂಬುವರಿಗೆ ಸೇರಿದ ಮನೆಯಲ್ಲೇ ಈ ಕಳ್ಳತನ ನಡೆದಿದೆ. ಸೋಮವಾರ ಬೆಳಗ್ಗೆ 10.45ಕ್ಕೆ ಮನೆಗೆ ಬೀಗ ಹಾಕಿ ಶಾರದಾ ಅವರು ಮಾರುಕಟ್ಟೆ ತೆರಳಿದಾಗ, ಹೊಂಚು ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮಾರುಕಟ್ಟೆಯಿಂದ ಶಾರದಾ ಹಾಗೂ ಕುಟುಂಬದ ಸದಸ್ಯರು ಮರಳಿದಾಗ ಮನೆಗೆ ಹಾಕಲಾಗಿದ್ದ ಕೀಲಿ ಮುರಿಯಲಾಗಿತ್ತಲ್ಲದೇ, ಮನೆಯಲ್ಲಿಟ್ಟಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಲಾಗಿದೆ ಎಂದು ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಮನೆಯ ಮಾಲೀಕರು ತಿಳಿಸಿದ್ದಾರೆ. ಈ ಕುರಿತಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೈಕ್ ಸವಾರ ಸಾವು
ಧಾರವಾಡ: ಇಲ್ಲಿನ ಕೆಲಗೇರಿ ಬೈಪಾಸ್ ಬಳಿ ಸೋಮವಾರ ರಾತ್ರಿ ನಿಯಂತ್ರಣ ತಪ್ಪಿ ಬೈಕ್ ಉರುಳಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಮಂಗಳವಾರ ಮೃತಪಟ್ಟಿದ್ದಾನೆ. ಕೆಲಗೇರಿಯ ಸತೀಶ ಗುರುಸಿದ್ಧಪ್ಪ ನೀರಲಕಟ್ಟಿ (28) ಮೃತಪಟ್ಟ ಯುವಕ. ಹುಬ್ಬಳ್ಳಿಯಿಂದ ಕೆಲಗೇರಿಯತ್ತ ವೇಗವಾಗಿ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬೈಕ್ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಧಾರವಾಡ: ತಾಲೂಕಿನ ಅಂಬೋಳ್ಳಿ ಗ್ರಾಮದ ಮದ್ಯ ವ್ಯಸನಿಯೊಬ್ಬ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ ಅಂಬೋಳ್ಳಿ ಗ್ರಾಮದ ಯಲ್ಲಪ್ಪ ದೇವೇಂದ್ರಪ್ಪ ಮೇಟಿ (55) ನೇಣು ಹಾಕಿಕೊಂಡ ವ್ಯಕ್ತಿ. ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತ್ಯನಾರಾಯಣಾಚಾರ್ಯ ನಿಧನ
ಧಾರವಾಡ: ನಗರದ ಶುಕ್ರವಾರ ಪೇಟ ನಿವಾಸಿ, ಮೂಲತಃ ಮುಂಡರಗಿ ಮೂಲದ ಸತ್ಯನಾರಾಯಣಾಚಾರ್ಯ (72) ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement