ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರಜಾಪ್ರಭುತ್ವ ಉಳಿವಿಗೆ ಮಾಧ್ಯಮಗಳಲ್ಲಿ ಪ್ರಾಮಾಣಿಕತೆ ಅಗತ್ಯ: ಪಾಪು

Rashmi Kasaragodu
Updated On : 26 Jan 2014, 2:37 am

ಧಾರವಾಡ: ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಮಾಧ್ಯಮ ಮತ್ತು ನ್ಯಾಯಾಂಗ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೇಳಿದರು. ಕರ್ನಾಟಕ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಶನಿವಾರ ನಡೆದ 'ನವ ಮಾಧ್ಯಮ ಮತ್ತು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ' ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ನನ್ನ ಪತ್ರಿಕೋದ್ಯಮದ ವೃತ್ತಿ ಜೀವನದಲ್ಲಿ ಎಂದಿಗೂ ಹಣದ ಬೆನ್ನು ಹತ್ತಲಿಲ್ಲ. ಜೇಬಿನಲ್ಲಿ ಹಣವಿರದಿದ್ದರೂ ಲೇಖನಿ ಇರುತ್ತಿತ್ತು. ಆದರೆ, ಪ್ರಸ್ತುತ ಹಣ ಮಾಡಿಕೊಳ್ಳಲೆಂದೇ ಮಾಧ್ಯಮ ಕ್ಷೇತ್ರಕ್ಕೆ ಕೆಲವರು ಆಗಮಿಸುತ್ತಿದ್ದಾರೆ. ಹಣ ಗಳಿಸುವ ಆಶಯ ಇರುವವರು ದಯವಿಟ್ಟು ಬೇರೆ ವೃತ್ತಿ ಆಯ್ದುಕೊಳ್ಳಿ ಎಂದರು.  ಪ್ರಜೆಗಳನ್ನು ರಕ್ಷಿಸಬೇಕಾದ ಮಾಧ್ಯಮ ಹಾಗೂ ನ್ಯಾಯಾಂಗಗಳು ತಮ್ಮ ಕರ್ತವ್ಯದಲ್ಲಿ ವಿಫಲವಾದರೆ ಜನರನ್ನು ದೇವರೂ ರಕ್ಷಿಸಲಾರ. ಆದ್ದರಿಂದ ಪ್ರಜಾಭುತ್ವ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮಾಧ್ಯಮ ಹಾಗೂ ನ್ಯಾಯಾಂಗ ಪ್ರಾಮಾಣಿಕತೆಯಿಂದ ಕೆಲಸ ಮಾಡಲಿ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಳ ಅಧ್ಯಯನದೊಂದಿಗೆ ವೃತ್ತಿ ಜೀವನಕ್ಕೆ ಕಾಲಿರಿಸಿದರೆ ಮಾತ್ರ ಯಶಸ್ವಿ ಪತ್ರಕರ್ತರಾಗುತ್ತೀರಿ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement