ಹುಬ್ಬಳ್ಳಿ ಸೇವಾಶ್ರಮಕ್ಕೆ ಪ್ರೊ. ನ. ವಜ್ರಕುಮಾರ ಪ್ರಶಸ್ತ್ನಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 28
37 ವರ್ಷಗಳಿಂದ ವಿಕಲಚೇತನ ಮಕ್ಕಳಿಗೆ ಶಿಕ್ಷಣ ಮತ್ತು ವೈದ್ಯಕೀಯ ಸಹಾಯ ನೀಡಿ ಅವರಲ್ಲಿ ನೈತಿಕ ಧೈರ್ಯ, ಆತ್ಮವಿಶ್ವಾಸ ತುಂಬಿ, ದಾರಿದೀಪವಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮಕ್ಕೆ 2013ರ ಪ್ರೊ. ನ. ವಜ್ರಕುಮಾರ ಪ್ರಶಸ್ತ್ನಿ ಲಭಿಸಿದೆ.
ವಿಕಲಚೇತನ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಹುಬ್ಬಳ್ಳಿಯ ಗಬ್ಬೂರಿನ ಹತ್ತಿರ 20 ಎಕರೆ ಭೂಮ್ನಿ ಖರೀದಿಸಿ, ವಸತಿ ಶಾಲ್ನೆ ನಿರ್ಮಿಸಿದವರು ಐ.ಕೆ. ಲಕ್ಕುಂಡಿಯವರು. 1ನೇ ತರಗತಿಯಿಂದ 10ನೇ ತರಗತಿವರೆಗೆ ಶಿಕ್ಷಣ ನೀಡುತ್ತಿರುವ ಈ ಸೇವಾಶ್ರಮದಲ್ಲಿ ವಿಕಲಚೇತನ ಮಕ್ಕಳಿಗೆ ಬೇಕಾದ ಸಹಾನುಭೂತಿ, ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯದಿಂದ ನೀಡುವ ಶಿಕ್ಷಣ ಅನುಕರಣೀಯ. ರಾಜ್ಯದ ಬೆಳಗಾವಿ, ಕೊಪ್ಪಳ, ರಾಯಚೂರ, ಧಾರವಾಡ-ಹುಬ್ಬಳ್ಳಿ, ಬೀದರಗಳಿಂದ ಬರುವ ಇಲ್ಲಿಯ ಮಕ್ಕಳೆಲ್ಲ ಬಡ ಕುಟುಂಬದಿಂದ ಬಂದವರು. ಇಲ್ಲಿಯ ಅನೇಕ ಮಕ್ಕಳು ಉನ್ನ್ನತ ವ್ಯಾಸಂಗ ಪಡೆದು, ಉನ್ನ್ನತ ಹುದ್ದೆಗಳನ್ನು ಏರಿದವರು.
ಸದ್ಯ 255 ಮಕ್ಕಳ ವ್ಯಾಸಂಗ ಮಾಡುತ್ತಿದ್ದು, 185 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿಯೇ ಪ್ರವೇಶ ಪಡೆದಿದ್ದಾರೆ. ದಿನ ನಿತ್ಯ ಬಂದು ಹೋಗುವ ಮಕ್ಕಳನ್ನು ವಾಹನದಲ್ಲಿ ಕರೆತರುವ ವ್ಯವಸ್ಥೆ ಕಲ್ಪಿಸಲಾಗಿದೆ. 650ಕ್ಕೂ ಹೆಚ್ಚು ವಿಕಲಚೇತನ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ, ಕೃತಕ ಕಾಲು, ಕೈಗಳ ಜೋಡಣೆಯನ್ನ್ನು ವಿವಿಧ ಸಂಘಟನೆಗಳ ಮೂಲಕ ಮಾಡಿದೆ.
ಪ್ರೊ. ನ. ವಜ್ರಕುಮಾರ ಅವರು ನಿವೃತ್ತರಾದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅವರಿಗಾಗಿ ಅರ್ಪಿಸಿದ ಹಮ್ಮಿಣಿಯನ್ನ್ನು ಅಭಿನಂದನಾ ಪುರಸ್ಕಾರ ಸಮಿತಿ ಕಳೆದ ಹದಿಮೂರು ವರ್ಷಗಳಿಂದ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡುತ್ತಿರುವ ವ್ಯಕ್ತಿಗಳಿಗೆ, ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡುತ್ತ ಬಂದಿದೆ ಎಂದು ಪ್ರೊ. ನ. ವಜ್ರಕುಮಾರ ಪ್ರಶಸ್ತಿ ಸಂಯೋಜನಾಧಿಕಾರಿ ಡಾ. ಅಜಿತ ಪ್ರಸಾದ ತಿಳಿಸಿದ್ದಾರೆ.