ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ಕಲಾಮಂಡಳದಲ್ಲಿ ಛಾಯಾಚಿತ್ರಗಳ ಪ್ರದರ್ಶನ

Lingaraj Badiger
Updated On : 31 Jan 2014, 10:54 am

ಧಾರವಾಡ: ದಾರ್ಜಿಲಿಂಗ್‌ನಲ್ಲಿ ವಾಸವಾಗಿರುವ ಧಾರವಾಡ ಮೂಲದ ರೋಹಿನ್ ಡಿಸೋಜಾ ಅವರ ಛಾಯಾಚಿತ್ರಗಳ ಪ್ರದರ್ಶನ ನಗರದ ಕಲಾಮಂಡಳ ಆರ್ಟ್ ಗ್ಯಾಲರಿಯಲ್ಲಿ ಮಂಗಳವಾರ ನಡೆಯಿತು.
ದಾರ್ಜಿಲಿಂಗ್ ಪ್ರದೇಶದಲ್ಲಿ ಚಹಾ ಬೆಳೆಯುವುದಕ್ಕಾಗಿ ಬ್ರಿಟಿಷರು ಮಾಡಿದ ನೈಸರ್ಗಿಕ ಹಾನಿ ಹಾಗೂ ಅಲ್ಲಿಯ ಜನರ ಕಷ್ಟಕರ ಬದುಕು ಕುರಿತು ಡಿಸೋಜಾ ಅವರ ಛಾಯಾಚಿತ್ರಗಳ ಮೂಲಕ ಧಾರವಾಡದ ಜನತೆಗೆ ತಿಳಿಸಿಕೊಟ್ಟರು.
ಅಲ್ಲಿನ ಕೃಷಿ ಚಟುವಟಿಕೆ, ಅಲ್ಲಿಯ ಜನಜೀವನ ಮತ್ತಿತರ ವಿಚಾರ ಹಾಗೂ ಅಲ್ಲಿನ ವನ್ಯ ಜೀವನದ ಬದುಕನ್ನು ಸಹ ಅನಾವರಣಗೊಳಿಸಿದರು. ದಾರ್ಜಿಲಿಂಗ್‌ನ ಅಪರೂಪದ ಪಕ್ಷಿ ಸಂಕುಲದ ಅದ್ಭುತ ಛಾಯಾಚಿತ್ರಗಳ ಪ್ರದರ್ಶನ ಸಹ ನಡೆಯಿತು. ಸಂಸ್ಥೆಯ ಟ್ರಸ್ಟಿ ಡಾ. ಮದನಮೋಹನ್ ತಾವರಗೇರಿ ರೋಹನ್ ಡಿಸೋಜಾ ಅವರನ್ನು ಸನ್ಮಾನಿಸಿದರು.
ಕಲಾಮಂಡಳದ ಕಾರ್ಯದರ್ಶಿ ಮಧು ದೇಸಾಯಿ ಸ್ವಾಗತಿಸಿದರು. ಗಾಯತ್ರಿ ದೇಸಾಯಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement