ಪದೋನ್ನತಿ ಹೊಂದಿದ ನ್ಯಾಯಾಧೀಶರಿಗೆ ಸನ್ಮಾನ
ಹುಬ್ಬಳ್ಳಿ: ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಔದ್ಯಮಿಕ ನ್ಯಾಯಾಧೀಕರಣದ ಅಧ್ಯಕ್ಷಾಧಿಕಾರಿಯಾಗಿದ್ದ ಸಿ.ಬಿ. ಹಿಪ್ಪರಗಿ ಅವರನ್ನು ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ಇತ್ತೀಚಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ ಟಿ. ವಿಠ್ಠಲರಾವ್, ಟಿ.ಎನ್. ಇನವಳ್ಳಿ, ಶ್ರೀಮತಿ ತಾರಿಮನಿ ಹಾಗೂ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ ವರ್ಗಾಗೊಂಡ ಬಸವರಾಜ ಚಂಗಟಿ, ವೀರಣ್ಣ ಸೋಮಶೇಖರ, ರವೀಂದ್ರ ಡಿ. ಆರಿ, ಎಸ್. ಜೆ. ಕೃಷ್ಣ ಹಾಗೂ ಮಂಜುನಾಥ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಸಿ. ಆರ್. ಪಾಟೀಲ, ನ್ಯಾಯಬೇಡಿ ಬರುವ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ನ್ಯಾಯಾಧೀಶ ಹಾಗೂ ನ್ಯಾಯವಾದಿಗಳ ಮೇಲಿದ್ದು ಇದನ್ನು ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳು ಯಶಸ್ವಿಯಾಗಿ ನಿಭಾಯಿಸಬೇಕು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರು, ನ್ಯಾಯ ಬೇಡಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡಲು ನ್ಯಾಯಾಧೀಶರ ಕಾರ್ಯಕ್ಕೆ ಹುಬ್ಬಳ್ಳಿ ವಕೀಲರು ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತಿ, ವಿಪುಲಾ, ಎಂ. ಬಿ. ಪೂಜಾರಿ, ಜಿ.ಎಂ. ಮೂಲಿಮನಿ, ಜಯರಾಜ ಪಿ. ಪಾಟೀಲ ಪಾಲ್ಗೊಂಡಿದ್ದರು. ಸಂಘದ ಕಾರ್ಯದರ್ಶಿ ಪುಟ್ಟು ಎಚ್. ತೋಟದ ನಿರ್ವಹಿಸಿದರು. ಕೆ. ಸಿ. ಪಾಟೀಲ ಸ್ವಾಗತಿಸಿದರು. ಎ.ಸಿ. ನವಲೂರ ವಂದಿಸಿದರು.