ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಫೆ. 2ಕ್ಕೆ ಕಾವ್ಯದ ಅರಳಿಕಟ್ಟೆ

Lingaraj Badiger
Updated On : 31 Jan 2014, 11:13 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 30
ಶಿಗ್ಗಾಂವಿ ಸಮೀಪದ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಫೆ. 2ರಂದು 'ಕಾವ್ಯದ ಅರಳಿಕಟ್ಟೆ- ಒಂದು ಕವಿತೆ-ಎರಡು ಮಾತು' ಕವಿಗೋಷ್ಠಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 55 ಜನ ಯುವ ಕವಿಗಳು ಪಾಲ್ಗೊಳ್ಳಲಿದ್ದಾರೆ. ಕಾವ್ಯದ ವಸ್ತು, ರೂಪ, ಆಕಾರ, ಸಮಕಾಲಿನ ಚಿಂತನೆ, ಇಂದಿನ ಕಾವ್ಯದ ಪಲ್ಲಟಗಳು, ಸಂವೇದನೆಗಳು, ಭಾವತೀರ್ವತೆಗಳು ಮತ್ತಿತರ ವಿಷಯಗಳಿಗೆ ಕವಿಗಳು ಸ್ಪಂದಿಸಲಿದ್ದಾರೆ.
ಉತ್ಸವ ರಾಕ್ ಗಾರ್ಡನ್‌ನಲ್ಲಿ ಉತ್ತರ ಕರ್ನಾಟಕದ ಯುವ ಕವಿಗಳನ್ನೊಳಗೊಂಡು ನಾಲ್ಕುನೂರು ಅಡಿ ಉದ್ದದ ಕಲಾಮಾರ್ಗ ಸೃಷ್ಟಿಯಾಗಲಿದೆ. ಸಮಕಾಲೀನ ಯುವಕವಿಗಳ ಭಾವಚಿತ್ರ, ಸಂಕ್ಷಿಪ್ತ ಕವಿಪರಿಚಯ, ಕವನ ಅಥವಾ ಕವನದ ಸಾಲುಗಳು, ಕವಿಯ ಭಾವನೆಗಳು, ವಿಚಾರಗಳು, ಅವನ ಪ್ರೇರಕ ಶಕ್ತಿ ಮತ್ತಿತರವುಗಳನ್ನು ಚಿತ್ರ ಶಿಲ್ಪದ ಮೂಲಕ ಕಲಾತ್ಮಕವಾಗಿ ರಚಿಸಲಾಗುವುದು ಎಂದು ಕನ್ನಡ ಯುವ ಜನ ಕ್ರಿಯಾ ಸಮಿತಿಯ ವಿಜಯಕಾಂತ ಪಾಟೀಲ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement