ಫೆ. 2ರಂದು ಉಚಿತ ಕಾರ್ಯಾಗಾರ
ಧಾರವಾಡ: ದಿ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ನಿಂದ ಫೆ. 2ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 3ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9980552080, 9980552081 ಸಂಪರ್ಕಿಸಬಹುದು.
ಧಾರವಾಡ: ಪುರಂದರ ಆರಾಧನೆ ಮುಕ್ತಾಯ
ಧಾರವಾಡ: ನಗರದ ಮಾಳಮಡ್ಡಿ ಪುರಂದರ ಮಂಟಪದಲ್ಲಿ ಇತ್ತೀಚೆಗೆ ಪುರಂದರೋತ್ಸವ ಸಮಿತಿ ವತಿಯಿಂದ ಪುರಂದರ ಆರಾಧನೆ ಜರುಗಿತು. ಪಂ. ವೆಂಕಟನರಸಿಂಹ ಜೋಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಜನಾ ಮಂಡಳಿಗಳಿಂದ ಭಜನೆ ಜರುಗಿತು. ಡಾ.ಎಸ್.ಎನ್. ಅಷ್ಟಪುತ್ರಿ, ಜಿ.ಡಿ. ಉಪಾಪಾಧ್ಯಾಯ, ಎಸ್.ಟಿ. ಖಾಸನೀಸ, ಜಿ.ವಿ. ನವಲಗುಂದ, ಶೇಷಗಿರಿ ಜೋಶಿ ಇದ್ದರು ಸಿ. ನಾಗರಾಜ ನಿರೂಪಿಸಿದರು.
ನಾಳೆ ಡಾ. ಮೆಣಸಿನಕಾಯಿ 102ನೇ ಜನ್ಮದಿನಾಚರಣೆ
ಧಾರವಾಡ: ಕೃಷಿ ಮಹಾವಿದ್ಯಾಲಯದ ಮಹಾನ್ ಶಿಲ್ಪಿ ಡಾ. ಎಸ್. ಡಬ್ಲೂ. ಮೆಣಸಿನಕಾಯಿ ಅವರ 102ನೇ ಜನ್ಮದಿನಾಚರಣೆಯನ್ನು ಫೆ. 1ರಂದು ಬೆಳಗ್ಗೆ 11ಕ್ಕೆ ಕೃಷಿ ವಿಶ್ವವಿದ್ಯಾಲಯದಲ್ಲಿ. ಕರ್ನಾಟಕ ಕೃಷಿ ಮಿಶನ್ ಅಧ್ಯಕ್ಷ ಡಾ. ಎಸ್.ಎ. ಪಾಟೀಲ ಹಾಗೂ ಗೌರಾದೇವಿ ಮೆಣಸಿನಕಾಯಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ಫೆ. 2ಕ್ಕೆ ಕೃಷಿ ಯಂತ್ರೋಪಕರಣ ಮೇಳ
ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಫೆ. 2ರಂದು ಕೃಷಿ ಯಂತ್ರೋಪಕರಣಗಳ ಮೇಳ ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ತಯಾರಕರು, ವಿತರಕರು ಹಾಗೂ ಮಾರಾಟಗಾರರು ವಿವಿಧ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶಿಸಲಿದ್ದಾರೆ. ವಿಶ್ವವಿದ್ಯಾಲಯದ ವಿಜ್ಞಾನಿಗಳು, ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳ ತಜ್ಞರು ರೈತರಿಗೆ ತಾಂತ್ರಿಕ ಮಾಹಿತಿ ನೀಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ ವಿಫಲ
ಕಲಘಟಗಿ: ತಾಲೂಕಿನ ಜಿನ್ನೂರಗ್ರಾಪಂ ಅಧ್ಯಕ್ಷೆ ಕಮಲವ್ವ ಕುರಿಯವರ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು ಮಂಡಿಸಿದ್ದ ಅವಿಶ್ವಾಸಗೊತ್ತುವಳಿ ಗ್ರಾಪಂ ಸದಸ್ಯರ ಅನುಪಸ್ಥಿತಿಯಿಂದಾಗಿ ವಿಫಲಗೊಂಡಿತು. ಜಿಪಂ ಅಧಿಕಾರಿಗಳ ಸಮ್ಮುಖದಲ್ಲಿ ಜರುಗಿದ ಅವಿಶ್ವಾಸ ಮಂಡನೆ ಗೊತ್ತುವಳಿ ಸಭೆಗೆ ನಿಗದಿತ ಪ್ರಮಾಣದಲ್ಲಿ ಸದಸ್ಯರು ಆಗಮಿಸದ ಹಿನ್ನೆಲೆಯಲ್ಲಿ ಅವಿಶ್ವಾಸ ಮಂಡನೆ ವಿಫಲವಾಗಿದೆ.