ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಫೆ. 5ಕ್ಕೆ ಸಕ್ಕರೆ ಉದ್ಯಮ ಕುರಿತ ವಿಚಾರಗೋಷ್ಠಿ

Lingaraj Badiger
Updated On : 31 Jan 2014, 11:13 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 30
ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಸಮಗ್ರವಾಗಿ ಚರ್ಚಿಸಲು ಹುಬ್ಬಳ್ಳಿಯ ಹೊಟೇಲ್ ಡೇನಿಸನ್ಸ್‌ನಲ್ಲಿ ಫೆ. 5ರಂದು ಒಂದು ದಿನದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಎನ್. ಎ. ಚರಂತಿಮಠ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಇಎಂಎಸ್, ದಿ ಸೌಥ್ ಇಂಡಿಯನ್ ಸುಗರ್ ಕೇನ್ ಆ್ಯಂಡ್ ಸುಗರ್ ಟೆಕ್ನಾಲಾಜಿಸ್ಟ್ ಅಸೋಸಿಯೇಶನ್ ಚೆನೈ, ಎಸ್. ನಿಜಲಿಂಗಪ್ಪಾ ಸುಗರ್ ಇನ್‌ಸ್ಟಿಟ್ಯೂಟ್ ಬೆಳಗಾವಿ, ಸಿಡಾಕ್ ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಎಸ್‌ಐಎಫ್ ಕನ್ಸ್‌ಲ್ಟಂಟ್ ಹುಬ್ಬಳ್ಳಿ ಸಹಯೋಗದಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ.
ರಾಜ್ಯದಲ್ಲಿ 60 ಸಕ್ಕರೆ ಕಾರ್ಖಾನೆಗಳಿದ್ದು, ರಾಜ್ಯದ ಗಡಿ ಪ್ರದೇಶದಿಂದ ಆಯ್ದ ಕೆಲ ಸಕ್ಕರೆ ಕಾರ್ಖಾನೆಗಳನ್ನೊಳಗೊಂಡ ಸುಮಾರು 80 ಸಕ್ಕರೆ ಉದ್ಯೋಗ ಸಂಸ್ಥೆಗಳು ಹಾಗೂ ಸಕ್ಕರೆ ಉದ್ಯಮಕ್ಕೆ ಸಂಬಂಧಪಟ್ಟ ಇತರ ಲಘು ಉದ್ಯಮ ಸಂಸ್ಥೆಗಳು ಗೋಷ್ಠಿಯಲ್ಲಿ ಭಾಗವಹಿಸಲಿವೆ.
ಆರ್ಥಿಕ ಸಂಪನ್ಮೂಲತೆ ಹಾಗೂ ಸಕ್ಕರೆ ಉದ್ಯಮ, ಸಕ್ಕರೆ ಉದ್ಯಮ ಹಾಗೂ ಆದಾಯಕರ ಒಂದು ಸಮೀಕ್ಷೆ, ಸಕ್ಕರೆ ಉದ್ಯಮಕ್ಕೆ ವಿತ್ತಿಯ ಸಹಾಯ, ಸಕ್ಕರೆ ಕಾರ್ಖಾನೆಯ ಅಂಕಿಅಂಶಗಳ ಕುರಿತಾಗಿ ಗೋಷ್ಠಿ ನಡೆಯಲಿದೆ. ಡಾ. ಸಂಕರಶನ್ ಬಸು, ಡಿ. ಆರ್. ವೆಂಕಟೇಶ, ಎನ್. ಎ. ಚರಂತಿಮಠ, ಆರ್. ವಿ. ವಿಟನಾಳ, ಆರ್. ಬಿ. ಖಾಂಡಗವೆ ವಿಚಾರ ಗೋಷ್ಠಿ ನಡೆಸಿಕೊಡುವರು. ಕಬ್ಬಿನ ವ್ಯವಸಾಯ ಹಾಗೂ ಸಕ್ಕರೆ ಉತ್ಪಾದನಾ ಉದ್ಯಮ ಅನೇಕ ಸಮಸ್ಯೆ ಎದುರಿಸುತ್ತಿದೆ. ಇದು ಉದ್ಯೋಗ ವಲಯದಲ್ಲಿ ಅಸಮಾಧಾನ ಸೃಷ್ಟಿಸಿದೆ. ಇಂಥ ಉದ್ಯೋಗಕ್ಕೆ ಸಂಬಂಧಪಟ್ಟ ಎಲ್ಲ ಸಮುದಾಯದವರಿಗೆ ಸರಿಹೊಂದುವ ಉದ್ಯೋಗಾಭಿವೃದ್ಧಿ ಸೃಷ್ಟಿ ಮಾಡುವುದಲ್ಲದೇ, ಸಕ್ಕರೆ ಉದ್ಯಮಕ್ಕೆ ಸಂಬಂಧಪಟ್ಟ ಕಾರ್ಯಾಚರಣೆಯ ವಿಷಯವಾಗಿ ತಜ್ಞರಿಂದ ಅವಲೋಕನೆ ಮಾಡಬೇಕಾದ ಅವಶ್ಯಕತೆ ಹುಟ್ಟಿಕೊಂಡಿದೆ. ಕಬ್ಬು ಉದ್ಯಮ ವರ್ಷದಲ್ಲಿ 200 ದಿನ ಮಾತ್ರ ನಡೆಯುತ್ತದೆ, ಇನ್ನುಳಿದ ದಿನ ಉದ್ಯೋಗ ಹಾಗೂ ಆದಾಯ ವಂಚಿತರಾಗಬೇಕಾಗುತ್ತದೆ. ಸರ್ಕಾರ ನಿಗದಿಪಡಿಸುವ ಕಬ್ಬಿನ ದರ, ಸಂಬಂಧಪ್ಟ ತೆರಿಗೆಯ ವಿಧಿ ವಿದಾನ ಹಾಗೂ ನಿರಂತರ ಮೌಲ್ಯ ವರ್ಧನೆಯಿಂದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಉದ್ಯಮಿಗಳು ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಸಕ್ಕರೆ ಉದ್ಯಮಕ್ಕೆ ವಿತ್ತ ಸಹಾಯ ಕಲ್ಪಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೃಷಿಕರಿಗೆ ಹಾಗೂ ಉದ್ಯಮಿಗಳಿಗೆ ಗೋಷ್ಠಿ ಮುಖಾಂತರ ತಲುಪಿಸಲಾಗುವುದು ಎಂದು ಚರಂತಿಮಠ ತಿಳಿಸಿದರು.
ಗೋಷ್ಠಿಯಲ್ಲಿ ಆರ್. ವಿ. ವಿಟನಾಳ, ಸಿ. ಎಚ್. ಅಂಗಡಿ, ಶ್ರೀನಿವಾಸ ಪಾಟೀಲ, ಆರ್. ಎನ್. ನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement