ವಿಜಯಲಕ್ಷ್ಮಿ ಗಿಯರ್ಸ್ ಉತ್ಪನ್ನ ಗುಣಮಟ್ಟದ್ದು
ಹುಬ್ಬಳ್ಳಿ: ವಿಜಯಲಕ್ಷ್ಮಿ ಗಿಯರ್ಸ್‌ನ ಉತ್ಪನ್ನ ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು ಸ್ಪರ್ಧಾತ್ಮಕ ಬೆಲೆಯುಳ್ಳದ್ದಾಗಿವೆ ಎಂದು ಎಸ್.ವಿ. ಪುರೋಹಿತ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸಿ ಜನರೇಟರ್, ಟ್ರ್ಯಾಕ್ಟರ್, ಪಿಟಿಓ ಜೆನ್‌ಸೆಟ್, ಎಸ್ಕಾರ್ಟ್ಸ್ ಡಿಸೈಲ್ ಜನರೇಟರ್‌ಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿವೆ. ವಿಜಯಲಕ್ಷ್ಮಿ ಗೇರ್ಸ್ 5 ಕೆವಿಎಯಿಂದ 40 ಕೆವಿಎ ವರೆಗಿನ ಎಲ್‌ಜಿ ಬ್ರ್ಯಾಂಡ್ ಹೆಸರಿನ ಎ.ಸಿ. ಜನರೇಟರ್ ತಯಾರಿಸಲಾಗುತ್ತಿದೆ. ಟ್ರ್ಯಾಕ್ಟರ್ ಪಿಟಿಓ ಜೆನ್‌ಸೆಟ್‌ಗಳನ್ನು ಯಾವುದೇ ಕಂಪನಿಯ ಟ್ರ್ಯಾಕ್ಟರ್‌ಗಳಿಗೆ ಬಳಸಬಹುದಾಗಿದೆ. ಇದಕ್ಕೆ ಪರ್ಯಾಯವಾಗಿ ವಿಜಯಲಕ್ಷ್ಮಿ ಎಸ್ಕಾರ್ಟ್ಸ್ ಡಿಸೈಲ್ ಜನರೇಟ್‌ಗಳನ್ನು ಉತ್ಪಾದಿಸುತ್ತಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕಕ್ಕಾಗಿ ರೈತರಿಗೆ ಹಾಗೂ ಉಳಿದ ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಪುರೋಹಿತ ತಿಳಿಸಿದರು.