ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸ್ವಾಮಿ ಸ್ವರೂಪಾನಂದ ಬಂಧಿಸಿ: ಜೆಡಿಯು ಪ್ರತಿಭಟನೆ

Mainashree
Updated On : 3 Jul 2014, 9:19 am

ಹುಬ್ಬಳ್ಳಿ: ಶಿರಡಿ ಸಾಯಿಬಾಬಾ ಕುರಿತು ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದರನ್ನು ತಕ್ಷಣ ಬಂಧಿಸುವಂತೆ, ಬರಗಾಲ ಕಾಮಗಾರಿ ಶೀಘ್ರ ಪ್ರಾರಂಭಿಸಬೇಕೆಂದು ಆಗ್ರಹಿಸಿ ಜೆಡಿಯು ಕಾರ್ಯಕರ್ತರು ಹುಬ್ಬಳ್ಳಿ ಮಿನಿವಿಧಾನಸೌಧದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸಾಯಿಬಾಬಾರ ಬಗ್ಗೆ ಅರ್ಥವಿಲ್ಲದ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಸ್ವಾಮಿ ಸ್ವರೂಪಾನಂದರ ಬಂಧನಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲದ ಮುನ್ಸೂಚನೆಗಳು ಕಾಣುತ್ತಿದ್ದು, ತಕ್ಷಣ ಬರಗಾಲ ಕಾಮಗಾರಿ ಕೈಗೊಳ್ಳುವ ಮೂಲಕ ಗುಳೆ ಹೋಗುತ್ತಿರುವ ಜನರನ್ನು ತಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೋರಿದರು.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಮೂಲಕ ರಾಜ್ಯಪಾಲ, ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಜೆಡಿಯು ಮಹಾನಗರ ಜಿಲ್ಲಾಧ್ಯಕ್ಷ ಈರಪ್ಪ ಎಮ್ಮಿ, ಸಾವಿತ್ರಿಬಾಯಿ ಗುಂಡಿ, ಬಶೀರ್‌ಅಹ್ಮದ್ ಶೇಖ್, ಎಸ್.ಎನ್. ಹೈಬತ್ತಿ, ರತ್ನಾ ಗಂಗಣ್ಣವರ, ಶಕುಂತಲಾ ಶೆಟ್ಟಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement