ಸ್ವರ್ಣ ಜ್ಯುವೆಲರ್ಸ್‌ನಿಂದ ಚಿನ್ನಾಭರಣ ನವೀಕರಣ ಮೇಳ, ಜ್ಯುವೆಲರಿ ಕೋರ್ಸ್
ಹುಬ್ಬಳ್ಳಿ: ಸ್ವರ್ಣ ಜ್ಯುವೆಲರ್ಸ್ ಸುವರ್ಣ ಮಹೋತ್ಸವ ಅಂಗವಾಗಿ ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ವತಿಯಿಂದ ಚಿನ್ನಾಭರಣ ನವೀಕರಣ ಮೇಳ ಹಾಗೂ ಜ್ಯುವೆಲರಿ ಕೋರ್ಸ್ ಪ್ರಾರಂಭಿಸಲಾಗಿದೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ಆಡಳಿತ ನಿರ್ದೇಶಕ ಜಿ. ಗೋಪಾಲಕೃಷ್ಣ ನಾಯಕ್, ಬೇರೆಡೆ ಖರೀದಿಸಿದವೂ ಸೇರಿದಂತೆ ಎಲ್ಲ ರೀತಿಯ ಆಭರಣಗಳನ್ನು ಈ ಮೇಳದಲ್ಲಿ ನವೀಕರಿಸಲಾಗುವುದು ಎಂದರು. ಜು. 12 ಹಾಗೂ 13ರಂದು ಗದಗ ತಹಸೀಲ್ದಾರ ಕಚೇರಿ ಬಳಿ ಇರುವ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ, ಜು. 14ರಂದು ನರಗುಂದ ಮುನ್ಸಿಪಾಲಿಟಿ ಕಟ್ಟಡದಲ್ಲಿ, ಜು. 15ರಂದು ನವಲಗುಂದ ವಿನಾಯಕ ಪೇಟ್‌ನ ಲಕ್ಷ್ಮೀ ಜುವೆಲರ್ಸ್‌ನಲ್ಲಿ, ಜು. 16ರಂದು ಅಳ್ನಾವರ ಇಂದಿರಾನಗರದಲ್ಲಿರುವ ದಿ ಅಳ್ನಾವರ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ, ಜು. 17ರಂದು ಹಳಿಯಾಳ ಶಿವಾಜಿ ವೃತ್ತದ ಹೋಟೆಲ್ ಅನ್ನಪೂರ್ಣದಲ್ಲಿ, ಜು. 18ರಂದು ದಾಡೇಲಿ ಸಂಡೇ ಮಾರ್ಕೆಟ್ ಎದುರಿನ ಪ್ರಭು ಜನರಲ್ ಸ್ಟೋರ್ಸ್‌ನಲ್ಲಿ, ಜು. 19ರಂದು ಯಲ್ಲಾಪುರದ ಲಕ್ಷ್ಮೀನಾರಾಯಣ ವೆಂಕಟರಮಣ ಮಠದಲ್ಲಿ, ಜು. 21ರಂದು ಲಕ್ಷ್ಮೇಶ್ವರದ ಶ್ರೀ ರೇಣುಕಾ ಫರ್ಟಿಲೈಜರ್ಸ್ ಮತ್ತು ಜನರಲ್ ಮರ್ಚಂಟ್‌ನಲ್ಲಿ, ಜು. 22ರಂದು ಹಾವೇರಿ ಲಕ್ಕಿ ಸೂಪರ್ ಮಾರ್ಕೆಟ್ ಎದುರಿನ ಸ್ವಾತಿ ಹೋಟೆಲ್‌ನಲ್ಲಿ ಚಿನ್ನಾಭರಣ ನವೀಕರಣ ಮೇಳ ನಡೆಯಲಿದೆ. ಜ್ಯುವೆಲರಿ ಉದ್ಯಮದಲ್ಲಿ ವಿಪುಲ ಉದ್ಯೋಗಾವಕಾಶಗಳಿದ್ದು, ಯುವಕ-ಯುವತಿಯರಿಗೆ ಚಿನ್ನಾಭರಣ ತಯಾರಿಕೆಗಾಗಿ ಇನ್‌ಹೌಸ್ ಸರ್ಟಿಫಿಕೇಟ್ ಕೋರ್ಸ್ ಇನ್ ಜ್ಯುವೆಲರಿ ಪ್ರಾರಂಭಿಸಲಾಗುತ್ತಿದೆ. ಪಿಯುಸಿ ಉತ್ತೀರ್ಣವಾದ ಗರಿಷ್ಠ 25 ವಯೋವುತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ನೀಡಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಈ ಕೋರ್ಸ್ ಪ್ರಾರಂಭಗೊಳ್ಳಲಿದೆ. ಸುರೇಶ ಶೆಟ್ಟಿಗಾರ್ ಹಾಗೂ ದೇವಿದಾಸ್ ಪ್ರಭು ಹಾಜರಿದ್ದರು.