ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ ವಿದ್ಯಾವರ್ಧಕ ಸಂಘಕ್ಕೆ 125ರ ಸಂಭ್ರಮ

Lingaraj Badiger
Updated On : 17 Jul 2014, 10:56 am

ಧಾರವಾಡ: ಕನ್ನಡ ಭಾಷೆ, ಭಾಷಿಕರ ಬಗ್ಗೆ ಅನಾದರವಿದ್ದ ಕಾಲದಲ್ಲಿ ಕನ್ನಡ ನುಡಿ ಹಾಗೂ ಸಂಸ್ಕೃತಿ ಉಳಿಸಿ, ಬೆಳೆಸಲು 1890ರ ಜು. 20ರಂದು ಜನ್ಮ ತಾಳಿದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಈಗ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮ. ಜು. 19 ಹಾಗೂ 20ರಂದು ಸಂಸ್ಥಾಪನೆಯ ಶತಮಾನೋತ್ತರ ಬೆಳ್ಳಿ ಹಬ್ಬದಾಚರಣೆ ನಡೆಯುತ್ತಿದ್ದು, ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಚಿಂತನ-ಮಂಥನ, ಚಿತ್ರಕಲಾ ಪ್ರದರ್ಶನ, ಕನ್ನಡ ಕೆಚ್ಚಿನ ಹಾಡುಗಾರಿಕೆ, ಜಾನಪದ ಮತ್ತು ಸುಗಮ ಸಂಗೀತ ನಡೆಯಲಿದೆ. ಜು. 20ರ ಸಂಜೆ 5ಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಶತಮಾನೋತ್ತರ ಬೆಳ್ಳಿ ಹಬ್ಬದಾಚರಣೆ ಉದ್ಘಾಟಿಸಲಿದ್ದಾರೆ. ರಾ.ಹ. ದೇಶಪಾಂಡೆ, ಶ್ಯಾಮರಾವ್ ವಿಠ್ಠಲ, ವೆಂಕಟರಂಗೋ ಕಟ್ಟಿ, ಗುರುಸಿದ್ದಪ್ಪ ಗಿಲಗಂಚಿ, ಶ್ರೀನಿವಾಸರಾವ್ ರೊದ್ದ, ರಾಮರಾವ್ ದೇಸಾಯಿ, ಶಾಂತವೀರಪ್ಪ ಮೆಣಸಿನಕಾಯಿ, ಶೇಷಗಿರಿರಾವ್ ಕೊಪ್ಪಿಕರ, ಗುರಾಚಾರ್ಯರು, ಧೊಂಡೋ ನರಸಿಂಹ ಮುಳಬಾಗಿಲ ಕೈ ಜೋಡಿಸಿ ವಿದ್ಯಾವರ್ಧಕ ಸಂಘ ಕಟ್ಟಿ ಬೆಳೆಸಿದರು. ಮೈಸೂರು ಅರಸರಿಂದ 1905ರಲ್ಲಿ ಸಂಘಕ್ಕೆ ಸ್ವಂತ ಕಟ್ಟಡದ ಭಾಗ್ಯ ದೊರೆಯಿತು. ಐತಿಹಾಸಿಕ ಗೋಕಾಕ ಚಳವಳಿಯ ನೇತೃತ್ವ ವಹಿಸಿದ ಸಂಘ, 2010ರಿಂದ ಧಾರವಾಡ, ಕಾಶಿ, ಮುಂಬೈ, ಬರೋಡಾದಲ್ಲಿ ನಾಲ್ಕು ಅಖಿಲ ಭಾರತ ಹೊರನಾಡು ಕನ್ನಡಿಗರ ಸಮ್ಮೇಳನ ಮಾಡಿತು. 50 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿರುವ ನಾಡೋಜ ಡಾ೤ ಪಾಟೀಲ ಪುಟ್ಟಪ್ಪ, ಈಗ ಸರ್ಕಾರದಿಂದ ವಾರ್ಷಿಕ ರು. 1 ಕೋಟಿ ಅನುದಾನ ಬರುವಂತೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement