ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೇತ್ರ ತಪಾಸಣಾ ಶಿಬಿರ ಇಂದು

Lingaraj Badiger
Updated On : 18 Jul 2014, 11:24 am

ಹುಬ್ಬಳ್ಳಿ: ಉಣಕಲ್ ಕ್ರಾಸ್ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ಹಾಗೂ ಎಸ್‌ಎಸ್‌ಕೆ ತುಳಜಾ ಭವಾನಿ ದೇವಸ್ಥಾನ ಪಂಚ ಕಮೀಟಿ ವತಿಯಿಂದ ಜು. 18ರಂದು ಬೆಳಗ್ಗೆ 10 ಗಂಟೆಯಿಂದ ದಾಜಿಬಾನ ಪೇಟೆಯ ಸೀತಾಬಾಯಿ ಕಲ್ಯಾಣ ಮಂಟಪದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಡಾ. ಶ್ರೀಧರ ಅಮೀನ್ ಕೋರಿದ್ದಾರೆ.
ಅತ್ಯಾಚಾರ ಖಂಡಿಸಿ ಎಬಿವಿಪಿ ಪ್ರತಿಭಟನೆ
ಹುಬ್ಬಳ್ಳಿ: ಬೆಂಗಳೂರಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ನಾಸೀರ್ ಹೈದರ್‌ನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಅತ್ಯಾಚಾರ ಪ್ರಕರಣ ಖಂಡಿಸಿ, ಇದೇ ಸಂದರ್ಭದಲ್ಲಿ ಆರೋಪಿ ನಾಸೀರ್‌ನ ಪ್ರತಿಕೃತಿಯನ್ನು ಪ್ರತಿಭಟನಾಕಾರರು ದಹಿಸಿದರು.

ಎಂಜಿನಿಯರಿಂಗ್ ಪದವೀಧರರಿಗೆ ಪದವಿ ಪ್ರದಾನ ಸಮಾರಂಭ ನಾಳೆ
ಧಾರವಾಡ: ಇಲ್ಲಿನ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಕಾಲೇಜಿನ 4ನೇ ಎಂಜಿನಿಯರಿಂಗ್ ಪದವೀಧರರಿಗೆ ಪದವಿ ಪ್ರದಾನ ಸಮಾರಂಭ ಜು. 19ರಂದು ನಡೆಯಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಮೋಹನಕುಮಾರ, ಅಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಸಭಾಭವನದಲ್ಲಿ ನಡೆಯುವ ಪದವಿ ಪ್ರದಾನ ಸಮಾರಂಭದಲ್ಲಿ 639 ವಿದ್ಯಾರ್ಥಿಗಳು ಪ್ರಮಾಣ ಪತ್ರ ಸ್ವೀಕರಿಸುತ್ತಾರೆ. ಪ್ರತಿ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗುತ್ತದೆ. ಎಲ್ಲ ವಿಭಾಗಗಳ ಪೈಕಿ ವಿದ್ಯುನ್ಮಾನ ಮತ್ತು ಸಂಪರ್ಕ (ಇ ಅಂಡ ಸಿ) ವಿಭಾಗದ ಉಷಾ ನಾಯಕ ಅತೀ ಹೆಚ್ಚು ಅಂಕ ಪಡೆದಿದ್ದು ಬಂಗಾರ ಪದಕ ಪಡೆಯಲಿದ್ದಾಳೆ ಎಂದರು. ಸಮಾರಂಭಕ್ಕೆ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ. ಚಿದಾನಂದಗೌಡ ಆಗಮಿಸುವರು. ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ನಿರಂಜನ ಕುಮಾರ ಅಧ್ಯಕ್ಷತೆ ವಹಿಸುತ್ತಾರೆ ಎಂದರು. ನಮ್ಮ ಕಾಲೇಜು ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 5ನೇ ಉತ್ತಮ ಕಾಲೇಜಾಗಿದ್ದು, ಭಾರತದಲ್ಲಿ 24ನೇ ಸ್ಥಾನದಲ್ಲಿದೆ ಎಂದರು. ಇದೇ ಜುಲೈ ಕೊನೆ ವಾರದಲ್ಲಿ ಪ್ರಾಚಾರ್ಯ ಸ್ಥಾನದಿಂದ ನಿವೃತ್ತಿಯಾಗುತ್ತಿದ್ದು, ನನ್ನ ಅಧಿಕಾರಾವಧಿಯಲ್ಲಿ ಐಬಿಎಂಆರ್, ಕೃಷಿ ವಿವಿ, ಎಕ್ಸೆಂಚರ್ ಕಂಪನಿಯೊಡನೆ ಒಪ್ಪಂದ ಮಾಡಿಕೊಂಡು ವಿವಿಧ ಸಂಶೋಧನೆಗೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿದ್ದೇನೆ. ಒಟ್ಟಾರೆ ಮೂರು ವರ್ಷದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ ತೃಪ್ತಿ ಇದೆ ಎಂದು ಡಾ. ಮೋಹನಕುಮಾರ ಹೇಳಿದರು. ಪ್ರಾಧ್ಯಾಪಕರಾದ ಡಾ. ಕೆ. ಗೋಪಿನಾಥ, ಡಾ. ಎಂ.ಆರ್. ಕಪ್ಪಾಳಿ, ಪ್ರೊ. ಜಗದೀಶ ಪೂಜಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement