ಸರ್ಕಾರ ವಿರುದ್ಧ ಬಿಜೆಪಿ ಪ್ರತಿಭಟನೆ
ಕಲಘಟಗಿ: ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚುತ್ತಿರುವುದನ್ನು ತಡೆಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಘಟಕದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಜಿಪಂ ಮಾಜಿ ಸದಸ್ಯೆ ಮಾಲಾ ಗೋಕುಲ, ಮಹಿಳಾ ಮೋರ್ಚಾದ ರತ್ನಾಬಾಯಿ ಗಬ್ಬೂರ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದು ಚಿಂತಾಮಣಿ, ಪಿಎಲ್ಡಿ. ಬ್ಯಾಂಕ್ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿದರು. ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಗಲುಹೊತ್ತಿನಲ್ಲಿಯೇ ಓಡಾಡಲು ಬರದಂತೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಿವಿಗೊಡದ ಗೃಹ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮೌನವಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಅಗಡಿ, ಸದಸ್ಯ ವೈ.ಬಿ. ದಾಸನಕೊಪ್ಪ, ತಾಪಂ ಉಪಾದ್ಯಕ್ಷ ಯಲ್ಲಾರಿ ಶಿಂಧೆ, ಪ.ಪಂ. ಸದಸ್ಯ ಗಂಗಾಧರ ಗೌಳಿ, ನಗರ ಘಟಕ ಅಧ್ಯಕ್ಷ ಬಸವರಾಜ ಹುಬ್ಳಿಮಠ, ಬಸವರಾಜ ಶೆರೆವಾಡ, ಚಂದ್ರಗೌಡ ಪಾಟೀಲ, ರಾಘವೇಂದ್ರ ಅಳ್ನಾವರ, ಬಸವರಾಜ ಕಡ್ಲಾಸ್ಕರ, ನಿಂಗಪ್ಪ ಸುತಗಟ್ಟಿ, ಐ.ಸಿ. ಗೋಕುಲ, ತಾಪಂ ಅಧ್ಯಕ್ಷೆ ಲಲಿತಾ ಲಮಾಣಿ, ಬಸಮ್ಮಾ ಹಿರೇಹೊನ್ನಳ್ಳಿ, ಕೃಷ್ಣ ರಾಠೋಡ, ಶೇಖಪ್ಪ ಹುಲಗೂರ, ಹನಮಂತ ಚವರಗುಡ್ಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ತಹಸೀಲ್ದಾರ್ ಡಿ.ಎಂ. ಶಂಕರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.