ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿಟಮಿನ್ ಎ ಮಾತ್ರೆ ನುಂಗಿದ ಮೂವರು ಮಕ್ಕಳು ಅಸ್ವಸ್ಥ

Lingaraj Badiger
Updated On : 24 Jul 2014, 11:42 am

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 23
ಅಳ್ನಾವರದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಮಕ್ಕಳಿಗೆ ನೀಡಿದ ವಿಟಮಿನ್ ಎ ಮಾತ್ರೆ, ಜಂತಿನ ಔಷಧ ಸೇವಿಸಿ ಮೂವರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಅಲ್ಲಿನ ನೆಹರು ನಗರದ ಅಂಗವಾಡಿ ಕೇಂದ್ರದಲ್ಲಿ ಪುನೀತ ಯಲ್ಲಪ್ಪ ಬೆಟಗೇರಿ (ಎರಡೂವರೆ ವರ್ಷ), ಸುಹಾನ ನದೀಮ ಗೋಶನಟ್ಟಿ (3), ಸಬಾ ನದೀಮ ಗೋಶನಟ್ಟಿ (3), ಜ್ಯೋತಿ ಸುರೇಶ ಕಲ್ಯಾಣಕರ (4), ಬಸವ ಮಧುಕರ ತಲ್ಲೂರ (4), ಪ್ರಜ್ವಲ ವಿಠ್ಠಲ ಬೆಟಗೇರಿ (ಮೂರುವರೆ ವರ್ಷ), ದೀಪಕ ದೇವೇಂದ್ರ ಬೆಟಗೇರಿ (ಎರಡೂವರೆ ವರ್ಷ) ಸೇರಿ 10 ಮಕ್ಕಳು ಮಾತ್ರೆಗಳನ್ನು ಸೇವಿಸಿದ್ದವು. ಈ ಪೈಕಿ ಮೂವರಿಗೆ ವಾಂತಿ ಆಗಿದೆ.
10 ಮಕ್ಕಳಿಗೆ ಅಳ್ನಾವರ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆ ತರಲಾಗಿದೆ. ಯಾವುದೇ ಆಪಾಯವಿಲ್ಲ. 6 ವರ್ಷದೊಳಗಿನ ಮಕ್ಕಳಿಗೆ ಈ ಔಷಧಿ ನೀಡುತ್ತಿದ್ದು, ಜು. 21ರಿಂದ ಆರಂಭವಾಗಿದೆ. ಅಂಧತ್ವ ನಿವಾರಣೆಗೆ ಈ ವಿಟಮಿನ್ ನೀಡಲಾಗುತ್ತಿದ್ದು, 1.83 ಲಕ್ಷ ಮಕ್ಕಳಿಗೆ ನೀಡುವ ಗುರಿ ಇದೆ. ಚಿಕಿತ್ಸೆ ನೀಡಿದ ವೈದ್ಯರು ಬಹುಶಃ ಎ ಮಾತ್ರೆಯಲ್ಲಿ ಅನ್ಯ ಔಷಧಿ ಮಿಶ್ರಣವಾದ ಹಿನ್ನೆಲೆಯಲ್ಲಿ ಈ ರೀತಿ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಎನ್.ಎಂ. ಅಂಗಡಿ ಪತ್ರಿಕೆಗೆ ತಿಳಿಸಿದರು.
ಜಿಲ್ಲಾಸ್ಪತ್ರೆಗೆ ಡಿಸಿ ಪಿ. ರಾಜೇಂದ್ರ ಚೋಳನ್, ಜಿಪಂ ಅಧ್ಯಕ್ಷ ಸುರೇಶ ಗಾಣಿಗೇರ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement