ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿದ್ಯಾರ್ಥಿಗಳು ಕೀಳರಿಮೆ ತೊರೆಯಿರಿ: ಪಿ.ಬಿ. ಕೋಟೂರ

Lingaraj Badiger
Updated On : 25 Jul 2014, 11:28 am

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 24
ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಪ್ರತಿಭಾವಂತರು. ಆದರೆ, ಹಿಂಜರಿಕೆ ಹಾಗೂ ಕೀಳರಿಮೆ ಇದೆ. ಇದರಿಂದ ಹೊರಬಂದಲ್ಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂದು ವಿಪ್ರೋ ಕಂಪನಿ ವ್ಯವಸ್ಥಾಪಕ ಪಿ.ಬಿ. ಕೋಟೂರ ಹೇಳಿದರು.
ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ನಡೆದ ವಿಪ್ರೋ ಪಾಲಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂಸ್ಥೆ ವಿಪ್ರೋದ ಒಂದು ಕೇಂದ್ರ ಆದ ನಂತರ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಉದ್ಯೋಗದ ಬಾಗಿಲು ತೆರೆದಂತಾಗಿದೆ. ಸಂವಹನ ಕಲೆ ಎಂದರೆ ಕೇವಲ ಇಂಗ್ಲಿಷ್ ಮಾತನಾಡುವುದಲ್ಲ. ನಾವು ಹೇಳುವ ವಿಷಯ ಇತರರಿಗೆ ಅರ್ಥವಾದರೆ ಅದೇ ಅತ್ಯುತ್ತಮ ಸಂವಹನ. ಪಠ್ಯದ ಜತೆಗೆ ಸಾಮಾನ್ಯ ಜ್ಞಾನ. ಅರಿವಿದ್ದಲ್ಲಿ ವಿದ್ಯಾರ್ಥಿ ಯಾವ ಮಟ್ಟಕ್ಕಾದರೂ ಏರಬಲ್ಲರು. ಕಳೆದ ಸಂದರ್ಶನದಲ್ಲಿ ಆಯ್ಕೆಯಾದ 82 ವಿದ್ಯಾರ್ಥಿಗಳು ಇದಕ್ಕೆ ಸಾಕ್ಷಿ ಎಂದರು.
ಜೆಎಸ್ಸೆಸ್ ಪ್ರಾಚಾರ್ಯ ಡಾ. ಅಜಿತ ಪ್ರಸಾದ, ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉದ್ಯೋಗಕ್ಕಾಗಿ ಅಲೆದಾಡುವ ಪ್ರಸಂಗವನ್ನು ವಿಪ್ರೋ ಹಾಗೂ ಜೆಎಸ್ಸೆಸ್ ಸಂಸ್ಥೆಗಳು ದೂರ ಮಾಡಿವೆ. ಉದ್ಯೋಗದ ಜತೆಗೆ ಸ್ನಾತಕೋತ್ತರ ಪದವಿ ದೊರಕಿಸಿಕೊಡುತ್ತಿರುವ ವಿಪ್ರೋ ಕಂಪನಿಯ ಕಾರ್ಯ ಶ್ಲಾಘನೀಯ ಎಂದರು.
ವಿಪ್ರೋದ ಅಧಿಕಾರಿ ನೀತೂ ಜಾಯ್, ಜೆಎಸ್ಸೆಸ್ ಉದ್ಯೋಗಾಧಿಕಾರಿ ಮಹಾವೀರ ಉಪಾಧ್ಯೆ, ಬಿಸಿಎ ಮುಖ್ಯಸ್ಥರಾದ ವಿವೇಕ ಲಕ್ಷ್ಮೇಶ್ವರ, ಸುನಿತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement