ಹುಬ್ಬಳ್ಳಿ: ಕಾರಿನಲ್ಲಿದ್ದ ರು. 2.40 ಲಕ್ಷ ಕಳ್ಳತನ
ಹುಬ್ಬಳ್ಳಿ: ಗಮನ ಬೇರೆಡೆ ಸೆಳೆದು ಕಾರಿನ ಬ್ಯಾಗ್ನಲ್ಲಿಟ್ಟಿದ್ದ ರು. 2.40 ಲಕ್ಷ ದೋಚಿದ ಘಟನೆ ಹುಬ್ಬಳ್ಳಿ ಮಿನಿವಿಧಾನಸೌಧದ ಬಳಿ ನಡೆದಿದೆ. ಧಾರವಾಡದ ನಿವಾಸಿ ಸಂಜಯ ಇಂಗಳೆ ಕಾರಿನೊಳಗಿನ ಹಿಂಬದಿ ಸೀಟ್ನಲ್ಲಿ ಬ್ಯಾಗ್ ಇಟ್ಟು ಮಿನಿವಿಧಾನಸೌಧಕ್ಕೆ ಹೋಗಿದ್ದಾರೆ. ಬ್ಯಾಗ್ನಲ್ಲಿ ನಗದು ಹಾಗೂ ಚೆಕ್ಬುಕ್ಗಳಿದ್ದವು. ಇದೇ ಸಮಯಕ್ಕೆ ಬಂದ ಅಪರಿಚಿತರಿಬ್ಬರು ಕಾರು ಚಾಲಕನಿಗೆ ನಿಮ್ಮ ಕಾರಿನ ಹಿಂದೆ ಹಣ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದಿದ್ದಾರೆ. ಕಾರು ಚಾಲಕ ಸೀಟಿನಿಂದ ಎದ್ದು ಹಣ ಬಿದ್ದಿರುವುದನ್ನು ನೋಡಲು ಹೋದಾಗ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.