ಇಂದು ಪ್ರೊ. ತೇಜಸ್ವಿ ಕಟ್ಟಿಮನಿ ಸನ್ಮಾನ ಸಮಾರಂಭ
ಧಾರವಾಡ: ಧಾರವಾಡ ಕಟ್ಟೆ ಹಾಗೂ ನೀಲಪರ್ವತ ಪ್ರಕಾಶನ ಜಂಟಿಯಾಗಿ ಜು. 27ರಂದು ಸಂಜೆ 5ಕ್ಕೆ ಸೃಜನಾ ರಂಗಮಂದಿರದಲ್ಲಿ ಪ್ರೊ. ತೇಜಸ್ವಿ ಕಟ್ಟಿಮನಿ ಸನ್ಮಾನ ಸಮಾರಂಭ ಹಮ್ಮಿಕೊಂಡಿವೆ. ವಿಶ್ರಾಂತ ಕುಲಪತಿ ಡಾ. ಎಂ.ಐ. ಸವದತ್ತಿ ಅಧ್ಯಕ್ಷತೆ ವಹಿಸಲಿದ್ದು, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅತಿಥಿಗಳಾಗಿ ಭಾಗವಹಿಸುತ್ತಾರೆ. ಮಧ್ಯಪ್ರದೇಶ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಭಾಗವಹಿಸುತ್ತಾರೆ. ಡಾ. ಡಿ.ಎಂ. ಹಿರೇಮಠ, ಡಾ. ಶಕುಂತಲಾ ನಿಂಗೊಡ್ತಿ, ಪ್ರೊ. ರಂಗರಾಜ ವನದುರ್ಗ, ಪ್ರೊ. ವಿಜಯಕುಮಾರ ಕಟಗಿಹಳ್ಳಿಮಠ, ಡಾ. ಬಸವರಾಜ ಡೋಣೂರ, ಡಾ. ಶಿವಾನಂದ ಕೆಳಗಿನಮನಿ, ಡಾ. ಗಣೇಶ ಪವಾರ, ಡಾ. ರೇಷ್ಮಾ ನದಾಫ್ ಅಭಿನಂದನಾ ಪರ ಮಾತನಾಡುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.