ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎರಡನೇ ಪತಿಗೆ ಪತ್ನಿಯಿಂದ ಜೀವ ಬೆದರಿಕೆ: ದೂರು

Rashmi Kasaragodu
Updated On : 27 Jul 2014, 12:41 pm

ಹುಬ್ಬಳ್ಳಿ: ಮೊದಲ ಮದುವೆಯ ವಿಷಯ ಅರಿತು ಜಗಳವಾಡಿದ ಎರಡನೇ ಪತಿ ಮೇಲೆ ಆತನ ಪತ್ನಿ ತನ್ನ ಸಹೋದರರಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ನಗರದ ಕಸಬಾಪೇಟ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ಪಕ ಕಾರಡಗಿಕರ ಎಂಬಾತನೇ ತನ್ನ ಪತ್ನಿ ಆಯಿಷಾಳ ಸಹೋದರರಿಂದ ಹಲ್ಲೆಗೊಳಗಾಗಿದ್ದಾನೆ. ಈತನ ಪತ್ನಿ ಆಯಿಷಾ ಈ ಮೊದಲು ಉಮಾಕಾಂತ ಹೊಟಕರನನ್ನು ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಉಮಾಕಾಂತನೊಂದಿಗೆ ಹೊಂದಾಣಿಕೆಯಾಗದ ಕಾರಣ ಆಯಿಷಾ ಪ್ರತ್ಯೇಕ ವಾಸವಾಗಿದ್ದಳು. ಎರಡು ವರ್ಷಗಳ ಹಿಂದೆ ಅಸ್ಪಕ ಕಾರಡಗಿಕರನೊಂದಿಗೆ ಮದುವೆಯಾದ ಆಯಿಷಾ, ತನ್ನ ಮೊದಲ ಮದುವೆಯ ವಿಷಯ ಬಚ್ಚಿಟ್ಟಿದ್ದಳು. ಆನಂತರ ಪದೇ ಪದೇ ತವರು ಮನೆಗೆ ಹೋಗುತ್ತಿದ್ದ ಆಯಿಷಾ, ಒಂದು ಬಾರಿ ತನ್ನ ಮೊದಲ ಪತಿಯ ಇಬ್ಬರು ಮಕ್ಕಳನ್ನು ಕರೆದುಕೊಂಡು ಎರಡನೇ ಪತಿ ಅಸ್ಪಕನ ಮನೆಗೆ ಹೋದಳು. ಆಗ ವಿಷಯ ಅರಿತ ಅಸ್ಪಕ ಜಗಳಕ್ಕಿಳಿದಾಗ ಆಯಿಷಾ ತನ್ನ ಸಹೋದರರನ್ನು ಕರೆಯಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾಳೆಂದು ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement