ಶಿವಸೇನೆ, ಎಂಇಎಸ್ ಸಂಘಟನೆ ರದ್ದತಿಗೆ ಆಗ್ರಹ
ಧಾರವಾಡ: ಗಡಿ ಪ್ರದೇಶದ ಭಾಷಾ ವೈಷ್ಯಮಕ್ಕೆ ಪ್ರಚೋದನೆ ನೀಡುತ್ತಿರುವ ಶಿವಸೇನೆ, ಎಂಇಎಸ್ ಸಂಘಟನೆಗಳನ್ನು ರದ್ದುಗೊಳಿಸಬೇಕೆಂದು ಧಾರವಾಡ ಕನ್ನಡಿಗ ಗೆಳೆಯರು ಆಗ್ರಹಿಸಿದ್ದಾರೆ. ರಾಜ್ಯದ ಗಡಿಭಾಗ ಪ್ರದೇಶ ಯಳ್ಳೂರಿನಲ್ಲಿ ಸುಮಾರು ವರ್ಷಗಳಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಸ್ಥಾಪಿಸಿದ ಮಹಾರಾಷ್ಟ್ರ ರಾಜ್ಯ ನಾಮಫಲಕವನ್ನು ಹೈಕೋರ್ಟ್ ಆದೇಶದ ಪ್ರಕಾರ ತೆರವುಗೊಳಿಸಲಾಗಿದೆ. ಅದರಿಂದ ಆಕ್ರೋಶಗೊಂಡ ಶಿವಸೇನೆ ಹಾಗೂ ಎಂಇಎಸ್ ಪದಾಧಿಕಾರಿಗಳು ಕೊಲ್ಲಾಪುರದಲ್ಲಿ ಕರ್ನಾಟಕಕ್ಕೆ ಸೇರಿದ 11 ಸಾರಿಗೆ ಬಸ್‌ಗಳನ್ನು ಜಖಂಗೊಳಿಸಿ, ಅವುಗಳ ಗ್ಲಾಸ್‌ಗಳನ್ನು ಪುಡಿ ಮಾಡಿದ್ದಾರೆ. ಅಲ್ಲದೇ, ಕನ್ನಡಿಗ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಕೂಡ ಮಾಡಿರುವುದನ್ನು ಖಂಡಿಸಿ ರಾಷ್ಟ್ರಪತಿ, ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಿದರು.