ವಿದ್ಯಾಸಿರಿ ಯೋಜನೆ ಮಾಹಿತಿಗೆ ಸೂಚನೆ
ಧಾರವಾಡ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಯೋಜನೆ (ವಿದ್ಯಾಸಿರಿ) ವಿದ್ಯಾರ್ಥಿವೇತನ ಮತ್ತು ಶುಲ್ಕ ವಿನಾಯಿತಿ ಸೌಲಭ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಪ್ರಕಟಣೆ ತಿಳಿಸಿದೆ.
ರಾಜ್ಯದ ಪದವಿ ಪೂರ್ವ, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಪದವಿ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್, ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಮತ್ತು ಪಶು ವೈದ್ಯಕೀಯ, ಸ್ನಾತಕೋತ್ತರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ, ಇ-ಪಾಸ್ ಪೋರ್ಟಲ್ನಲ್ಲಿ ಕಾಲೇಜಿನ ಮಾಹಿತಿ ಮತ್ತು ಬೋಧಿಸುತ್ತಿರುವ ಕೋರ್ಸ್ಗಳ ವಿವರ ಅಪ್ಲೋಡ್ ಮಾಡಬೇಕು.
ಬಾಕಿ ಇರುವ ಕಾಲೇಜುಗಳ ಪ್ರಾಚಾರ್ಯರು ಎಲ್ಲ ವಿವರಗಳನ್ನು ಇಲಾಖೆಯ ವೆಬ್ಸೈಟ್ ಡಿಡಿಠ///್ಞಛ್ಠಜಠಛಡಡ.್ಛ್ಜ.್ಜ್ಟಢ.್ಝಟಿಗೆ ಅಪ್ಲೋಡ್ ಮಾಡಬೇಕು. ಹೊಸ ಯೂಸರ್ ಐಡಿ, ಪಾಸ್ವರ್ಡ್ ಅಗತ್ಯವಿರುವ ಕಾಲೇಜುಗಳ ಪ್ಯಾಚಾರ್ಯರು ಕಾಲೇಜಿನ ಅಫಿಲಿಯೇಷನ್ ಮತ್ತು ಮಾನ್ಯತೆ ಪಡೆದ ಕೋರ್ಸುಗಳ ಆದೇಶ ಪ್ರತಿಯನ್ನು ಸ್ಕ್ಯಾನ್ ಮಾಡಿ, ಛಿಜ್ಛಛಿಟ್ಜಿಅ್ಞಛ್ಠ.ಟ್ಝ್ಛಿ.್ಝಟಿ ವಿಳಾಸಕ್ಕೆ ಕಳುಹಿಸಬಹುದು. ಈ ಪ್ರಕ್ರಿಯೆಗೆ ಆ. 10 ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ.