ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಎಸ್ಸೆನ್ನೆಲ್ ನಿವೃತ್ತ ನೌಕರಗೆ ಸನ್ಮಾನ

Rashmi Kasaragodu
Updated On : 29 Jul 2014, 11:16 am

ಧಾರವಾಡ: ಭಾರತ ಸಂಚಾರ ನಿಗಮ ನಿಯಮಿತ ಮುಂಬೈ ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಸವರಾಜ ಹೂಲಿಕೇರಿ ಅವರನ್ನು ಅಭಿಮಾನಿಗಳು ಸನ್ಮಾನಿಸಿದರು.
ಹಾರೋಬೆಳವಡಿ ಗೆಳೆಯರ ಬಳಗದ ಪರವಾಗಿ ಕಿತ್ತೂರು ರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನ ಇನಾಂಹೊಂಗಲ ಶಾಖೆಯ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ ಅವರು ಬಸವರಾಜ ಹೂಲಿಕೇರಿ ಹಾಗೂ ಗೌರಮ್ಮ ದಂಪತಿಯನ್ನು ಶಾಲು ಹೊದೆಸಿ, ಫಲ-ತಾಂಬೂಲ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಮಡಿವಾಳಯ್ಯ ಸಿದ್ಗಿರಿಮಠ, ಬಸಪ್ಪ ಆನಿಗೋಳ, ಬಸವಂತಪ್ಪ ಮಡಿವಾಳರ, ಈರಪ್ಪ ಏಣಗಿ, ನಾಗಪ್ಪ ಕಬ್ಬೂರ, ರಾಜು ಹೂಲಿಕೇರಿ, ಸುಮಿತಾ ಹೂಲಿಕೇರಿ, ಬಸವರಾಜ ಹೂಲಿಕೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement